ಅಮರ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಗುತ್ತಿಗಾರು ವತಿಯಿಂದ ಮಹಿಳಾ ದಿನಾಚರಣೆ ಪ್ರಯುಕ್ತ ಕಿಶೋರಿಯರಿಗೆ ಮತ್ತು ಸಂಘದ ಸದಸ್ಯರಿಗೆ ಮಾಹಿತಿ ಕಾರ್ಯಕ್ರಮ ಮಾ.12 ರಂದು ನಡೆಯಿತು.

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಪಿ .ಯಂ.ಶ್ರೀ ಸ.ಮಾ.ಹಿ.ಪ್ರಾ.ಶಾಲೆ ಗುತ್ತಿಗಾರು, ಇಲ್ಲಿಯ ಕಿಶೋರಿಯರಾದ
5 ನೇ ತರಗತಿಯಿಂದ 7 ನೇ ತರಗತಿ ತನಕದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಆರೋಗ್ಯ ಮಾಹಿತಿ ಮತ್ತು ಲಿಂಗತ್ವ ಮತ್ತು ಲಿಂಗ ಸಮಾನತೆ ಮಾಹಿತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಮಾಹಿತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ತಾಲೂಕು ಆರೋಗ್ಯ ಇಲಾಖೆಯ ಆರೋಗ್ಯ ಶಿಕ್ಷಣಾಧಿಕಾರಿ ಶ್ರೀಮತಿ ಪ್ರಮೀಳ ನಾರಾಯಣ ಇವರು ಕಿಶೋರಿಯರಿಗೆ ಆರೋಗ್ಯ ಬಗ್ಗೆ ಕಾಳಜಿ,ಹದಿಹರೆಯದಲ್ಲಿ ಉಂಟಾಗುವ ಬದಲಾವಣೆ , ಪೋಕ್ಸೋ ಕಾಯಿದೆ ಬಗ್ಗೆ, ಮಾಹಿತಿ ನೀಡಿದರು. ತಾಲೂಕು ಎನ್.ಆರ್.ಎಲ್.ಎಂ ಕಾರ್ಯಕ್ರಮ ವ್ಯವಸ್ಥಾಪಕರಾದ ಶ್ರೀಮತಿ ಶ್ವೇತಾ ಮಕ್ಕಳ ಹಕ್ಕುಗಳ ಬಗ್ಗೆ ಲಿಂಗತ್ವ ಹಾಗೂ ಲಿಂಗ ಸಮಾನತೆಯ ಬಗ್ಗೆ ಮಾಹಿತಿ ನೀಡಿದರು. ಈ ಕಾರ್ಯಕ್ರಮದಲ್ಲಿ ಮಕ್ಕಳಿಗೆ ವಿವಿಧ ಪ್ರಶ್ನೆಗಳನ್ನು ಕೇಳಿ ಸರಿಯಾದ ಉತ್ತರವನ್ನು ಹೇಳಿದ ವಿದ್ಯಾರ್ಥಿನಿಯರಿಗೆ ಒಕ್ಕೂಟದ ವತಿಯಿಂದ ಪ್ರೋತ್ಸಾಹಕ ಬಹುಮಾನವಾಗಿ ಪೆನ್ನು ನೀಡಲಾಯಿತು.
ಸಭಾವೇದಿಕೆಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸುಮಿತ್ರಾ ಮೂಕಮಲೆ, ಅಮರ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ಉಪಾಧ್ಯಕ್ಷೆ ಶ್ರೀಮತಿ ಶಿಸಿಮಾ ಜಾಕೆ. ಹಾಗೂ ಶಿಕ್ಷಕಿ ಶ್ರೀಮತಿ ಪೂರ್ಣಿಮಾ ತುಂಬತ್ತಾಜೆ ಉಪಸ್ಥಿತರಿದ್ದರು. ಒಕ್ಕೂಟದ ಎಂಬಿಕೆ ಮಿತ್ರಕುಮಾರಿ ಚಿಕ್ಮುಳಿ ಸ್ವಾಗತಿಸಿ ಶಾಲಾ ಶಿಕ್ಷಕಿ ಜೀವಿತಾ ವಂದಿಸಿದರು. ಎಲ್.ಸಿ.ಆರ್.ಪಿ ಗಳಾದ ಶಾರದ ಹಾಗು ದಿವ್ಯ ಸಹಕರಿಸಿದರು. ಒಕ್ಕೂಟದ ಪದಾಧಿಕಾರಿಗಳು,ಸದಸ್ಯರು,ಗುತ್ತಿಗಾರು ಗ್ರಂಥಾಲಯ ಮೇಲ್ವಿಚಾರಕಿ, ಶಾಲಾ ಶಿಕ್ಷಕಿಯರು ಈ ಕಾರ್ಯಕ್ರಮ ದಲ್ಲಿ ಭಾಗವಹಿಸಿದ್ದರು.