Home Uncategorized ಪಂಜ ಸೀಮೆಯ ದೇಗುಲಕ್ಕೆ ಆಗಮಿಸಿದ ಅದ್ವೈತ ರಥ

ಪಂಜ ಸೀಮೆಯ ದೇಗುಲಕ್ಕೆ ಆಗಮಿಸಿದ ಅದ್ವೈತ ರಥ

0

ಶ್ರೀ ಮದ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಮಹಾ ಸ್ವಾಮಿಗಳ ಪೂರ್ಣ ಅನುಗ್ರಹದೊಂದಿಗೆ , ಬಾನ್ಕುಳಿ ಮಠದಲ್ಲಿ ಜರುಗಲಿರುವ ಶಂಕರ ಪಂಚಮಿಯ ಪೂರ್ವಭಾವಿಯಾjಗಿ ಶ್ರೀ ಶಂಕರ ಭಗವತ್ಪಾದರ ದಿವ್ಯ ಸಂದೇಶವನ್ನು ಜನಮನಕ್ಕೆ ಸಾರುತ್ತಾ ಸಂಚರಿಸುತ್ತಿರುವ ಶ್ರೀ ಶಂಕರಮಹಾಪಾದುಕಾ ಅದ್ವೈತ ರಥವು ಮಾ. 14ರಂದು ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಆಗಮಿಸಿರುತ್ತದೆ. ಈ ವೇಳೆ ಪೂರ್ಣಕುಂಭ ಸ್ವಾಗತ,ಶಂಖ ಜಾಗಟೆಯೊಂದಿಗೆ ಬರಮಾಡಿಕೊಳ್ಳಲಾಯಿತು ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಡಾ.ದೇವಿಪ್ರಸಾದ್ ಕಾನತ್ತೂರ್ ಮತ್ತು ಮಹೇಶ್ ಭಟ್ ಕುಡುಪಿಲ ಶ್ರೀಪಾದುಕೆಗೆ ಹಾರಾರ್ಪಣೆ ಮಾಡಿದರು.ಶ್ರೀ ಪಾದುಕಾ ಪೂಜೆಯನ್ನು ದೇಗುಲದ ಪ್ರಧಾನ ಅರ್ಚಕರಾದ ರಾಮಚಂದ್ರ ಭಟ್ ನೆರವೇರಿಸಿದರು ಆಗಮಿಸಿದ ಭಕ್ತಾದಿಗಳು ಪುಷ್ಪಾರ್ಚನೆ ಮಾಡಿದರು.

ಹವ್ಯಕ ವಲಯದ ಕಾರ್ಯದರ್ಶಿಗಳಾದ ಶಿವಕುಮಾರ ಬಿಳಿನೆಲೆ, ಉಪಾಧ್ಯಕ್ಷ ಶ್ರೀಶ ಭಟ್ ಕರಿಕಳ,ಪ್ರಸನ್ನ ಭಟ್ ಕುಂಞಿಹಿತ್ಲು,ಡಾ.ವೆಂಕಟೇಶ್ ಗಿರಿ.ಮಂಜುಳಗಿರಿ ಮತ್ತು ಪದಾಧಿಕಾರಿಗಳು ಹಾಗೂ ಗುರು ಬಂಧುಗಳು ಭಾಗವಹಿಸಿದ್ದರು.

NO COMMENTS

error: Content is protected !!
Breaking