ಲೆಕ್ಕಪತ್ರ ಮಂಡನೆ – ನೂತನ ಸಮಿತಿ ರಚನೆ
ತೊಡಿಕಾನ ಗ್ರಾಮದ ದೊಡ್ಡಕುಮೇರಿ ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ದೈವಸ್ಥಾನದಲ್ಲಿ ಬಿರಿ ಮಂಜ ಲೆಕ್ಕಪತ್ರ ಮಂಡನೆ ಮತ್ತು ನೂತನ ಸಮಿತಿ ರಚನೆ ಸಭೆಯು ಮಾರ್ಚ್ 23 ರಂದು ನಡೆಯಿತು.
ಆಡಳಿತ ಮಂಡಳಿ ಅಧ್ಯಕ್ಷ ಭರತ್ ಬಾಳೆಕಜೆ ಇವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ದೇವಪ್ಪ ಹೈದಂಗೂರು, 2025 ನೇ ಸಾಲಿನ ನೇಮೋತ್ಸವದ ಆದಾಯ ಮತ್ತು ಖರ್ಚುಗಳನ್ನು ಸಭೆಯಲ್ಲಿ ಮಂಡಿಸಿದರು. ಲೆಕ್ಕಪತ್ರಕ್ಕೆ ಅನುಮೋದನೆ ಪಡೆದು, ನೇಮೋತ್ಸವದಲ್ಲಿ ಉಳಿಕೆ ಹಣವನ್ನು ದೈವಸ್ಥಾನದ ಅಭಿವೃದ್ಧಿಗೆ ಬಳಸಿಕೊಳ್ಳುವುದಾಗಿ ನಿರ್ಣಯಿಸಲಾಯಿತು.

ಆಡಳಿತ ಸಮಿತಿ ಕೋಶಾಧಿಕಾರಿ ರವೀಂದ್ರ ಜಿ ಪೂಜಾರಿ, ಕೃಷ್ಣಪ್ಪ ಪೂಜಾರಿ, ಅರಂತೋಡು ಸೊಸೈಟಿ ನಿರ್ದೇಶಕರು ಪ್ರಶಾಂತ್ ಕಾಪಿಲ, ಸಮಿತಿಯ ಗೌರವಾಧ್ಯಕ್ಷ ಕೇಪು ದೊಡ್ಡಕುಮೇರಿ, ಮುಖ್ಯ ಪೂಜಾರಿ ಚನಿಯ ದೊಡ್ಡಕುಮೇರಿ ವೇದಿಕೆಯಲ್ಲಿದ್ದರು.
ಈ ಸಂದರ್ಭದಲ್ಲಿ ಆಡಳಿತ ಸಮಿತಿ ಅಧ್ಯಕ್ಷರಾಗಿದ್ದ ಭರತ್ ಬಾಳೆಕಜೆ ಹಾಗೂ ಗೌರವಾಧ್ಯಕ್ಷ ಕೇಪು ದೊಡ್ಡಕುಮೇರಿ ಇವರನ್ನು ಸನ್ಮಾನಿಸಲಾಯಿತು.




ದೈವಸ್ಥಾನಕ್ಕೆ ವಸ್ತು ರೂಪದಲ್ಲಿ ಕೊಡುಗೆ ನೀಡಿದ, ಅಮ್ಮಣ್ಣಿ ಚಿಟ್ಟನ್ನೂರು, ದಿವಾಕರ ಕಲ್ಲಂಬಳ, ಸೀತಾರಾಮ ಅಡ್ಯಡ್ಕ ಇವರನ್ನು ಗೌರವಿಸಲಾಯಿತು.
ಸಭೆಯಲ್ಲಿ ನೂತನ ಆಡಳಿತ ಮಂಡಳಿಯನ್ನು ರಚಿಸಲಾಯಿತು. ಬಳಿಕ ಬಿರಿಮಂಜ ನಡೆದು ನೂರಾರು ಭಕ್ತರು ಪ್ರಸಾದ ಸ್ವೀಕರಿಸಿದರು.