ರೆಂಜಾಳ ಶ್ರೀ ಶಾಸ್ತಾವು ಯುವಕ ಮಂಡಲದ ವತಿಯಿಂದ ಅದ್ದೂರಿಯಾಗಿ ನಡೆದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ

0

ರೆಂಜಾಳ ಕ್ಷೇತ್ರದ ಪ್ರಧಾನ ಅರ್ಚಕರಿಂದ ಉದ್ಘಾಟನೆ

ಪ್ರಥಮ : ನ್ಯೂ ಸ್ಟಾರ್ ಎಡಮಂಗಲ

ದ್ವಿತೀಯ : ಎಸ್ ಎಂ ಟಿ ಕೌಡಿಚ್ಚಾರು

ಮರ್ಕಂಜದ ರೆಂಜಾಳ ಶ್ರೀ ಶಾಸ್ತ್ರವು ಯುವಕ ಮಂಡಲದ ವತಿಯಿಂದ ಹೊನಲು ಬೆಳಕಿನ ಸ್ಥಳೀಯ ತಂಡಗಳ ಮುಕ್ತ ಮತ್ತು ಆಹ್ವಾನಿತ ತಂಡಗಳ ಲೀಗ್ ಮಾದರಿಯ ವಾಲಿಬಾಲ್ ಪಂದ್ಯಾಟವು ಮಾ. 22ರಂದು ಶ್ರೀ ಶಾಸ್ತಾವು ಸದಾಶಿವ ಮಹಾಗಣಪತಿ ದೇವಸ್ಥಾನದ ವಠಾರದಲ್ಲಿ ನಡೆಯಿತು.

ಪಂದ್ಯಾಟದ ಉದ್ಘಾಟನೆಯನ್ನು ರೆಂಜಾಳ ದೇವಸ್ಥಾನದ ಪ್ರಧಾನ ಅರ್ಚಕ ಸುಬ್ರಹ್ಮಣ್ಯ ಭಟ್ ಬಳ್ಳಕಾನ ನೆರವೇರಿಸಿದರು.

ಸುಳ್ಯ ಅಟಲ್ ಜೀ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಹರೀಶ್ ಕಂಜಿಪಿಲಿ
ಟ್ರೋಫಿ ಅನಾವರಣ ಮಾಡಿದರು.

ಶಾಸ್ತ್ರವು ಯುವಕ ಮಂಡಲದ ಅಧ್ಯಕ್ಷ ರಾಜೇಶ್ ಬೇರಿಕೆ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅಥಿತಿಗಳಾಗಿ ಸುಳ್ಯ ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ವಿಜಯಕುಮಾರ್ ಉಬರಡ್ಕ, ನಿರ್ದೇಶಕ ವಿಜೇಶ್ ಹಿರಿಯಡ್ಕ, ಮರ್ಕಂಜ ಪ್ರಾ. ಕೃ. ಪ. ಸ. ಸಂಘದ ಅಧ್ಯಕ್ಷ ದಯಾನಂದ ಪುರ, ನಿರ್ದೇಶಕ ಸತೀಶ್ ರಾವ್ ದಾಸರಾಬೈಲು, ರೆಂಜಾಳ ಕ್ಷೇತ್ರದ ಸೇವಾ ಸಮಿತಿ ಅಧ್ಯಕ್ಷ ಪುಟ್ಟಣ್ಣ ಗೌಡ ಬಾನೂರು, ಸುಳ್ಯ ಯುವಜನ ಸಂಯುಕ್ತ ಮಂಡಳಿ ಉಸ್ತುವಾರಿ ನಿರ್ದೇಶಕ ನಿತೇಶ್ ಬೊಮ್ಮಟ್ಟಿ, ಬೊಳ್ಳಾಜೆ ಹಿ. ಪ್ರಾ. ಶಾಲಾ ನಿವೃತ್ತ ಮುಖ್ಯಾಯೊಪಧ್ಯಾಯಿನಿ ಶ್ಯಾಮಲಾ ಎ. ವಿ., ಸುಳ್ಯ ವಿನಯ್ ಐಸ್ ಕ್ರೀಮ್ ಮಾಲಕ ರಾಜೇಶ್ ಕೆಡಿಲಾಯ, ಉಬರಡ್ಕ ವಿನಯ ಕೆಟರರ್ಸ್ ನ ವಿನಯ ಯಾವಟೆ, ಪಂಚಸ್ಥಾಪನೆಗಳ ವ್ಯವಸ್ಥಾಪನಾ ಸಮಿತಿ ಸದಸ್ಯ ಅಣ್ಣು ಕಟ್ಟಕ್ಕೋಡಿ, ಸ್ಥಳದಾನಿಗಳಾದ ಕುಮಾರಸ್ವಾಮಿ ರೆಂಜಾಳ, ಕಾರ್ಯದರ್ಶಿ ಪದ್ಮನಾಭ ನಿಡ್ಯಮಲೆ ಆಗಮಿಸಿದ್ದರು.

ಪಂದ್ಯಾಟದಲ್ಲಿ ಆಹ್ವಾನಿತ ತಂಡದಲ್ಲಿ ಪ್ರಥಮ ಸ್ಥಾನವನ್ನು ನ್ಯೂ ಸ್ಟಾರ್ ಎಡಮಂಗಲ, ದ್ವಿತೀಯ ಸ್ಥಾನವನ್ನು ಎಸ್ ಎಂ ಟಿ ಕೌಡಿಚ್ಚಾರು, ತೃತೀಯ ಸ್ಥಾನವನ್ನು ಗಜಾನನ ಬೊಮ್ಮಾರು ಮತ್ತು ಚತುರ್ಥ ಬಹುಮಾನವನ್ನು ಕೋಟಿ ಚೆನ್ನಯ ಕೆಲೆಂಬೇರಿ ಪಡೆದುಕೊಂಡರು.

ಸ್ಥಳೀಯ ತಂಡಗಳ ಪಂದ್ಯಾಟದಲ್ಲಿ ಪ್ರಥಮ ಸ್ಥಾನವನ್ನು ಶ್ರೀ ವಿಷ್ಣು ಯುವಕ ಮಂಡಲ ತೇರ್ಥಮಜಲು ‘ಎ’, ದ್ವಿತೀಯ ಶ್ರೀ ವಿಷ್ಣು ಯುವಕ ಮಂಡಲ ತೇರ್ಥಮಜಲು ‘ಬಿ’, ತೃತೀಯ ಸ್ಥಾನವನ್ನು ಎಸ್ ಕೆ ನಾರ್ಣಕಜೆ ಮತ್ತು ಚತುರ್ಥ ಬಹುಮಾನವನ್ನು ಶ್ರೀ ಶಾಸ್ತಾವು ಯುವಕ ಮಂಡಲ ರೆಂಜಾಳ ಪಡೆದುಕೊಂಡಿತು.

ಪಂದ್ಯಾಟ ವೀಕ್ಷಣೆಗೆ ಬಂದವರಿಗೆ ಮತ್ತು ಕ್ರೀಡಾಪಟುಗಳಿಗೆ ಊಟ ಉಪಹಾರಾದ ವ್ಯವಸ್ಥೆ ಮಾಡಲಾಗಿತ್ತು.

ಇಡೀ ಕಾರ್ಯಕ್ರಮ ಅಚ್ಚು ಕಟ್ಟದ ವ್ಯವಸ್ಥೆಯಿಂದ ಕೂಡಿತ್ತು.