ಶ್ರೀ ಅಯ್ಯಪ್ಪ ಭಜನಾ ಮಂಡಳಿ ಕೊಲ್ಲಮೊಗ್ರು ಇದರ ನೇತೃತ್ವದಲ್ಲಿ ಹಾಗೂ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಸುಳ್ಯ ಸುಬ್ರಹ್ಮಣ್ಯ ವಲಯ ಇವರ ಸಹಕಾರದೊಂದಿಗೆ ಮಕ್ಕಳಿಗೆ ಸಂಸ್ಕಾರ ಮತ್ತು ಭಜನಾ ತರಬೇತಿ ಶಿಬಿರ ಕೊಲ್ಲಮೊಗ್ರು ಶ್ರೀ ಮಯೂರ ಕಲಾಮಂದಿರದಲ್ಲಿ ಉದ್ಘಾಟನೆ ಗೊಂಡಿತು. ಕಾರ್ಯಕ್ರಮದಲ್ಲಿ ಎ ಕೆ ಜಯರಾಮ ಅಂಬೆಕಲ್ಲು ರವರು ದೀಪ ಬೆಳಗಿಸಿ ಉದ್ಘಾಟಿಸಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ಲೋಕೇಶ್ ಪಿರನ ಮನೆ, ಮುಖ್ಯ ಅತಿಥಿಗಳಾಗಿ ಕೊಲ್ಲಮೊಗ್ರ ಹರಿಹರ ಶ್ರೀ ಹರಿಹರೇಶ್ವರ ಭಜನಾ ಮಂಡಳಿ ಅಧ್ಯಕ್ಷ ಜಯಪ್ರಕಾಶ್ ಭಟ್ ಕಟ್ಟ , ಕೊಲ್ಲಮೊಗ್ರು
ಅಯ್ಯಪ್ಪ ಭಜನಾ ಮಂದಿರ ಅಧ್ಯಕ್ಷ ಮತ್ತು ಜನಜಾಗೃತಿ ವೇದಿಕೆ ಅಧ್ಯಕ್ಷ
ಮಾಧವ ಚಾಂತಾಳ , ಭಜನಾ ಮಂದಿರದ ಸದಸ್ಯ ಗಿರಿಧರ್ ಕೆ ಪಿ , ಸುಳ್ಯ ತಾಲೂಕು ಭಜನಾ ಪರಿಷತ್ ಕಾರ್ಯದರ್ಶಿ
ಸತೀಶ್ ಟಿ ಎನ್, ಸುಬ್ರಮಣ್ಯ ವಲಯ ಭಜನಾ ಪರಿಷತ್ತಿನ ಅಧ್ಯಕ್ಷ ಶ್ರೀ ದೇವಿ ಹರಿಹರ, ಗ್ರಾಮ ಪಂಚಾಯಿತ್ ಅಧ್ಯಕ್ಷೆ ಮೋಹಿನಿ ಕಟ್ಟ, ಐನೆಕ್ಕಿದು ಬಾಲ ಗೋಕುಲ ನವ ಗ್ರಾಮ ಮಾತಾಜಿ
ಚಂದ್ರಕಲಾ , ಶ್ರೀ ಅಯ್ಯಪ್ಪ ಭಜನಾ ಮಂಡಳಿಯ ಅಧ್ಯಕ್ಷರು ಹೇಮಂತ್ ದೋಲನ ಮನೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.









ಕಾರ್ಯಕ್ರಮದಲ್ಲಿ ಪಂಚಮಿ ದೋಣಿಪಳ್ಳ ಪ್ರಾರ್ಥಿಸಿದರು.
ಶ್ರೀ ಅಯ್ಯಪ್ಪ ಭಜನಾ ಮಂಡಳಿಯ ಕಾರ್ಯದರ್ಶಿ ತೀರ್ಥರಾಮ ದೋಣಿಪಳ್ಳ ನಿರೂಪಿಸಿದರು ಮತ್ತು ಸ್ವಾಗತಿಸಿದರು.ಹೇಮಂತ್ ದೋಲನ ಮನೆ ವಂದಿಸಿದರು. ಎ.11 ರಿಂದ ಎ.17 ವರೆಗೆ ಶಿಬಿರ ನಡೆಯಲಿದೆ.










