ಕೊಯನಾಡು : ಸಂಪಾಜೆ ಪ್ರಾದೇಶಿಕ ವಲಯ ಅರಣ್ಯ ವತಿಯಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

0

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಂಪಾಜೆ ಪ್ರಾದೇಶಿಕ ವಲಯ ಅರಣ್ಯ ವತಿಯಿಂದ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಿಡ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆ ಯನ್ನು ಜೂ.5 ರಂದು ಆಚರಿಸಲಾಯಿತು.

ಈ ಸಂದರ್ಭದಲ್ಲಿ ವಲಯ ಅರಣ್ಯ ಅಧಿಕಾರಿ ಡೆನ್ಸಿ ದೇಚ್ಚಮ್ಮ,SDMC ಅಧ್ಯಕ್ಷ ಪುರುಷೋತ್ತಮ,ಗ್ರಾಮ ಪಂಚಾಯತ್ ಅಧ್ಯಕ್ಷೆರ ಮಾದೇವಿ ಬಾಲಚಂದ್ರ ಕಳಗಿ,ಉಪ ಅರಣ್ಯ ಅಧಿಕಾರಿ ರಕ್ಷಾ ರೈ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹನೀಫ್ ಎಸ್ ಪಿ,ಮುಖ್ಯೋಪಾಧ್ಯಾಯರಾದ ವನಿತಾ ಮಣಿ,ಗ್ರಾಮ ಪಂಚಾಯತ್ ಸದಸ್ಯ ನವೀನ್, SDMC ಸದಸ್ಯರಾದ ಉಮೇಶ್, ಕುಸುಮಕರ, ಅರಣ್ಯ ರಕ್ಷಕರಾದ ನಾಗರಾಜ್, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು ,ಅನಿವಾಸಿ ಭಾರತೀಯ ಜಾಫರ್ ಎಸ್ ಎಂ ಕೆ, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಬಳಿಕ ವಿದ್ಯಾರ್ಥಿಗಳಿಗೆ ವಿವಿಧ ತಳಿಗಳ ಗಿಡ ವಿತರಿಸಲಾಯಿತು.