
ಪಡ್ಪಿನಂಗಡಿ ಹಾಲು ಉತ್ಪಾದಕರ ಸಹಕಾರ ಸಂಘ ಮತ್ತು ವಿನಾಯಕ ಭಜನಾಮಂದಿರಕ್ಕೆ ಹೋಗುವ ಕಾಂಕ್ರಿಟೀಕರಣ ಗೊಂಡ ರಸ್ತೆಯ ಉದ್ಘಾಟನೆಯ ಜೂ.೨೪ರಂದು ನಡೆಯಿತು.
ಶಾಸಕಿ ಭಾಗೀರಥಿ ಮುರುಳ್ಯ ಮತ್ತು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ವಾಸುದೇವ ಅಲೆಂಗಾರ ತೆಂಗಿನಕಾಯಿ ಒಡೆಯುವ ಮೂಲಕ ರಸ್ತೆಯನ್ನು ಉದ್ಘಾಟಿಸಿದರು.
ಸಂಘದ ಸ್ಥಾಪಕ ನಿರ್ದೇಶಕರಾದ ವಾಸುದೇವ ನಡ್ಕ ದೀಪ ಬೆಳಗಿಸಿದರು.








ಈ ಸಂದರ್ಭದಲ್ಲಿ ಎಡಮಂಗಲ ಗ್ರಾಮ ಪಂಚಾಯತ್ ಅಧ್ಯಕ್ಷ ರಾಮಣ್ಣ ಜಾಲ್ತಾರು, ಉಪಾಧ್ಯಕ್ಷೆ ದಿವ್ಯ ಯೋಗಾನಂದ, ಸದಸ್ಯೆ ಸವಿತಾ, ಮುರುಳ್ಯ-ಎಣ್ಮೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವಸಂತ ನಡುಬೈಲು, ಪಡ್ಪಿನಂಗಡಿ ಹಾಲು ಉತ್ಪಾದಕರ ಸಹಕಾರ ಸಂಘದ ಉಪಾಧ್ಯಕ್ಷ ಶಿವರಾಮ ಚಾಮೆತ್ತಡ್ಕ, ಸ್ಥಾಪಕ ಅಧ್ಯಕ್ಷ ಸುರೇಶ್ ಕುಮಾರ್ ನಡ್ಕ, ಮಾಜಿ ಅಧ್ಯಕ್ಷ ಲಕ್ಷ್ಮೀನಾರಾಯಣ ನಡ್ಕ, ಕಾರ್ಯಪ್ಪ ಗೌಡ ಆಕ್ರಿಕಟ್ಟೆ, ಮಾಜಿ ಉಪಾಧ್ಯಕ್ಷ ಲಕ್ಷ್ಮಣ ಗೌಡ ಆಕ್ರಿಕಟ್ಟೆ, ವಿನಾಯಕ ಭಜನಾ ಮಂದಿರದ ಅಧ್ಯಕ್ಷ ಧರ್ಮಪಾಲ ನಡ್ಕ, ಬಾಲಕೃಷ್ಣ ಗೌಡ ಕುಳ್ಸಿಗೆ, ಭಜನಾ ಮಂದಿರದ ಪ್ರಮುಖರಾದ ಕೃಷ್ಣಪ್ಪ ಗೌಡ ಪಾಲಾರು, ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ತೀರ್ಥ ಡಿ., ಸಿಬ್ಬಂದಿ ನಂದಿನಿ ಆಕ್ರಿಕಟ್ಟೆ, ನಿರ್ದೇಶಕರಾದ ಬೆಳ್ಯಯಪ್ಪ ಗೌಡ ದೇರೆಟ್ಟಿ, ಮುತ್ತಪ್ಪ ಗೌಡ ಕುಳ್ಸಿಗೆ, ನಾರಾಯಣ ಪುಚ್ಚಮ, ರಾಮಚಂದ್ರ ರೈ ಕಲ್ಲೇರಿ, ಭವಾನಿ ಆಕ್ರಿಕಟ್ಟೆ, ಸತೀಶ್ ಐವತ್ತೊಕ್ಲು, ಸದಸ್ಯರಾದ ಜಗನ್ನಾಥ ರೈ, ಪ್ರಸಾದ್ ರೈ ಮರಕ್ಕಡ, ಕುಶಾಲಪ್ಪ ಆಕ್ರಿಕಟ್ಟೆ, ನಾರಾಯಣ ಅಲೆಂಗಾರ ವಿಶ್ವನಾಥ ರೈ ಕುಳಾಯಿತ್ತೋಡಿ, ಬಿಜೆಪಿ ಪ್ರಮುಖರಾದ ಮಹಾಶಕ್ತಿ ಕೇಂದ್ರ ಕುಟ್ರುಪಾಡಿ ಕಾರ್ಯದರ್ಶಿ ಜಯಪ್ರಕಾಶ್ ಲೆಕ್ಕಿಸಿರಿಮಜಲು, ಶಕ್ತಿ ಕೇಂದ್ರ ಪ್ರಮುಖರಾದ ಯೋಗಾನಂದ ಎಣ್ಮೂರು, ಪಡ್ಪಿನಂಗಡಿ ಬೂತ್ ಮಾಜಿ ಅಧ್ಯಕ್ಷ ಜಯರಾಜ್ ನಡ್ಕ, ಚಂದ್ರಶೇಖರ ರೈ ಮಾಳಿಗೆ, ಪ್ರಮುಖರಾದ ಅನೂಪ್ ಕುಮಾರ್ ಆಳ್ವ ಕಟ್ಟಬೀಡು, ಶ್ರೀಧರ ಅಮೈ, ಗುತ್ತಿಗೆದಾರರ ಪರವಾಗಿ ಕಾರ್ತಿಕ್ ಕಲ್ಲೇರಿ ಮೊದಲಾದವರು ಉಪಸ್ಥಿತರಿದ್ದರು.

ಸಂಘದ ಮಾಜಿ ಅಧ್ಯಕ್ಷರಾದ ಲಕ್ಷ್ಮೀನಾರಾಯಣ ನಡ್ಕಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.










