ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಪುಸ್ತಕ ಪ್ರಕಟಣೆ ಯೋಜನೆಯಡಿ ಪುಸ್ತಕ ಪ್ರಕಟಿಸಲು ಉದ್ದೇಶಿಸಲಾಗಿದೆ. ಆದ್ದರಿಂದ ಲೇಖಕರು ಅರೆಭಾಷೆ ಕಥೆ, ಅರೆಭಾಷೆ ಅಜ್ಜಿ ಕಥೆ, ಅರೆಭಾಷೆ ಜನಪದ, ಅರೆಭಾಷೆ ಕವನ, ಅರೆಭಾಷೆ ಲೇಖನ, ಅರೆಭಾಷೆ ವಿಚಾರ ಸಾಹಿತ್ಯ, ಅರೆಭಾಷೆ ಲಲಿತ ಪ್ರಬಂಧ, ಅರೆಭಾಷೆ ಸಂಶೋಧನ ಕೃತಿಗಳು ಇನ್ನಿತರೆ ಬರಹಗಳಿದ್ದಲ್ಲಿ ಡಿಟಿಪಿ ಪ್ರತಿಗಳನ್ನು ಅಕಾಡೆಮಿಗೆ ಸಲ್ಲಿಸುವಂತೆ ಹಾಗೂ ಇ-ಮೇಲ್ ಮೂಲಕ [email protected] ಕಳುಹಿಸುವಂತೆ ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಅವರು ಕೋರಿದ್ದಾರೆ.









ತಮ್ಮ ಡಿಟಿಪಿ ಪ್ರತಿಗಳನ್ನು ಸಲ್ಲಿಸಲು ಜು. 31 ಕೊನೆಯ ದಿನಾಂಕವಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಅಧ್ಯಕ್ಷರು, ರಿಜಿಸ್ಟ್ರಾರ್, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ಕಾಫಿ ಕೃಪಾ, ರಾಜಸೀಟ್ ರಸ್ತೆ, ಮಡಿಕೇರಿ, ಕೊಡಗು ಜಿಲ್ಲೆ. ಮೊ ನಂ 6362522677 ಸಂಪರ್ಕಿಸಬಹುದು. [email protected] ಪುಸ್ತಕಗಳ ಆಯ್ಕೆಯ ಹಕ್ಕು ಅಕಾಡೆಮಿಯದಾಗಿರುತ್ತದೆ ಹಾಗೂ ಬರಹ ಕನಿಷ್ಟ 70 ರಿಂದ 80 ಪುಟಗಳಿರಬೇಕು ಎಂದು ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಅವರು ತಿಳಿಸಿದ್ದಾರೆ.










