ಶೌರ್ಯ” ದ ಸಾಧನಾ ವರದಿ ಮಂಡನೆ- ಎನ್.ಡಿ.ಆರ್.ಎಫ್ ಕಮಾಂಡರ್ ರಿಗೆ ಸನ್ಮಾನ
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ.ಟ್ರಸ್ಟ್ ಸುಳ್ಯ ತಾಲೂಕು , ಜನಜಾಗೃತಿ ಪ್ರಾದೇಶಿಕ ವಿಭಾಗ ಹಾಗೂ ತಾಲೂಕಿನ “ಶೌರ್ಯ” ವಿಪತ್ತು ನಿರ್ವಹಣಾ ಘಟಕದ ಸ್ವಯಂ ಸೇವಕರ ತರಬೇತಿಕಾರ್ಯಾಗಾರವು ಸುಳ್ಯದ ಲಯನ್ಸ್ ಸೇವಾ ಸದನದಲ್ಲಿ ಜು.3 ರಂದು ನಡೆಯಿತು.
ಕಾರ್ಯಗಾರದಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷ ಲೋಕನಾಥ್ ಅಮೆಚೂರ್ ರವರು ವಹಿಸಿದ್ದರು. ತಾಲೂಕು ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಣಾ ಧಿಕಾರಿ ರಾಜಣ್ಣ ರವರು ದೀಪ ಪ್ರಜ್ವಲಿಸಿದರು.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್, ಯೋಜನೆಯ ಜಿಲ್ಲಾ ಪ್ರಾದೇಶಿಕ ನಿರ್ದೇಶಕ ಬಾಬು ನಾಯ್ಕ್ ಎಸ್, ಸ್ವಸಹಾಯ ಸಂಘದ ಕೇಂದ್ರ ಒಕ್ಕೂಟದ
ಅಧ್ಯಕ್ಷ ಸುರೇಶ್ ಕಣೆಮರಡ್ಕ,ಯೋಜನಾಧಿಕಾರಿ ಮಾಧವ ಗೌಡ, ವಿಪತ್ತು ನಿರ್ವಹಣಾ ಘಟಕದ ಮಾಸ್ಟರ್ ಪಿ.ಜಿ.ಜಯರಾಮ, ಕ್ಯಾಪ್ಟನ್ ಸತೀಶ್ ಬಂಬುಳಿ, ಜನಜಾಗೃತಿ ವೇದಿಕೆಯ ಯೋಜನಾಧಿಕಾರಿ ಗಣೇಶ್ ಆಚಾರ್ಯ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಎನ್.ಡಿ.ಆರ್.ಎಫ್ ಟೀಮ್ ಕಮಾಂಡರ್ ಶಾಂತಿಲಾಲ್ ಜಟಿಯ ಮತ್ತು ಜೈವಂತ್ ಪಠಗಾರ್ ರವರನ್ನು ಸನ್ಮಾನಿಸಲಾಯಿತು.
ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂ ಸೇವಕರ 5 ವರ್ಷದ ಕಾರ್ಯ ಸಾಧನೆಯ ಸಂಪೂರ್ಣ ಚಿತ್ರಣದ ಸಾಕ್ಷ್ಯ ಚಿತ್ರವನ್ನು ಪ್ರದರ್ಶಿಸಲಾಯಿತು.
ಶೌರ್ಯ” ದ ಸ್ವಯಂ ಸೇವಕರಿಗೆ ಮಾಹಿತಿ ಮಾರ್ಗದರ್ಶನ ಹಾಗೂ ಘಟಕದ ವ್ಯವಸ್ಥೆ ಯ ಬಗ್ಗೆ ವಿವೇಕ್ ವಿನ್ಸೆಂಟ್ ಪಾಯಸ್ ರವರು ಸಲಹೆ ನೀಡಿದರು.









ಎನ್.ಡಿ.ಆರ್.ಎಫ್ ಟೀಂ ಕಮಾಂಡರ್ ಶಾಂತಿ ಲಾಲ್ ಜಟಿಯಾ ರವರು ಹಿಂದಿ ಭಾಷೆಯಲ್ಲಿ ಶೌರ್ಯ ದ ಸದಸ್ಯರಿಗೆ ತರಬೇತಿ ಕಾರ್ಯಗಾರ ನಡೆಸಿದರು. ವಿನೋದ್ ಆರ್ಯ ರವರು ಕನ್ನಡಕ್ಕೆ ಅನುವಾದ ಮಾಡಿದರು.
ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸಾಧನಾ ವರದಿಯನ್ನು ಈ ಸಂದರ್ಭದಲ್ಲಿ ಮಂಡಿಸಲಾಯಿತು.
ತಾಲೂಕಿನಲ್ಲಿ 165 ಮಂದಿ ಸ್ವಯಂ ಸೇವಕರಿದ್ದಾರೆ.
ಸುಮಾರು 150 ಕ್ಕೂ ಮಿಕ್ಕಿ ದೇವಸ್ಥಾನಗಳ ಸ್ವಚ್ಚತೆ, 45 ಬಸ್ ನಿಲ್ದಾಣದ ಸ್ವಚ್ಚತೆ, 95 ಮಾಸಾಶನ ಪಡೆಯುವ ಕುಟುಂಬದ ಮನೆ ಸ್ವಚ್ಚತಾ ಕಾರ್ಯ,185 ಮನೆಗಳನ್ನು ಪ್ರಾಕೃತಿಕ ವಿಕೋಪದ ಸಮಯದಲ್ಲಿ ಸ್ವಚ್ಚತಾ ಕಾರ್ಯ, 37 ಮಂದಿ ಅಪಘಾತ ಸಂದರ್ಭದಲ್ಲಿ ಆಸ್ಪತ್ರೆಗೆ ದಾಖಲಿಸಿರುವುದು.
120 ಮನೆಗಳ ದುರಸ್ತಿ ಕಾರ್ಯ, ಸುಮಾರು 225 ಹಾನಿಯಾದ ಮನೆಗಳ ದುರಸ್ತಿ ಕಾರ್ಯ, ಅರಂಬೂರಿನಲ್ಲಿ ಸ್ವಂತ ವೆಚ್ಚದಿಂದ ಒಂದು ಮನೆ ರಚನೆ, 36 ಬಾವಿಗಳ ಸ್ವಚ್ಚತಾ ಕಾರ್ಯ,
42 ನೀರಿನ ಟ್ಯಾಂಕ್ ಸ್ವಚ್ಚತೆಯನ್ನು
ಸೇವೆಯ ರೂಪದಲ್ಲಿ ನಿರ್ವಹಿಸಲಾಗಿದೆ ಎಂದು ವಿವರ ನೀಡಿದರು.
ಶೌರ್ಯ ಘಟಕ ಸದಸ್ಯೆ
ಲೀಲಾವತಿ ಕೊಲ್ಲಮೊಗ್ರ ಪ್ರಾರ್ಥಿಸಿದರು. ಯೋಜನಾಧಿಕಾರಿ ಮಾಧವ ಗೌಡ ಸ್ವಾಗತಿಸಿ, ಮೇಲ್ವಿಚಾರಕ ದಿನೇಶ್ ವಂದಿಸಿದರು.
ಸುಬ್ರಹ್ಮಣ್ಯ, ಬೆಳ್ಳಾರೆ, ನಿಂತಿಕಲ್ಲು, ಗುತ್ತಿಗಾರು, ಮಂಡೆಕೋಲು, ಸಂಪಾಜೆ ವಲಯದ ಶೌರ್ಯ ಘಟಕದ ಸ್ವಯಂ ಸೇವಕ ರು ಪಾಲ್ಗೊಂಡರು. ಶ್ರೀಮತಿ ಸವಿತಾ ಕಾರ್ಯಕ್ರಮ ನಿರೂಪಿಸಿದರು.










