ಪೊಲೀಸ್ ಇಲಾಖೆಯ ಉದ್ಯೋಗಿ ಸಂದ್ಯಾಮಣಿ ಅವರ ಪುತ್ರ ಆಶಿಶ್ ಕೆ ವೈ ಗೆ ಕಬಡ್ಡಿಯಲ್ಲಿ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ.









ಉತ್ತರಕಾಂಡದ ಹರಿದ್ವಾರಾದಲ್ಲಿ
ನಡೆದ 18 ವರ್ಷದ ಕಬ್ಬಡಿ ರಾಷ್ಟ್ರೀಯ ಪಂದ್ಯಾಟದಲ್ಲಿ ಆಶಿಶ್ ಕೆ ವೈ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದರು.
ಭಾರತೀಯ ಕ್ರೀಡಾ ಪಾಧಿಕಾರದ ತಂಡಕ್ಕೆ ಗುಜರಾತಿನಲ್ಲಿ ಆಯ್ಕೆಯಾಗಿದ್ದ ಇವರು ಭಾರತೀಯ ಕ್ರೀಡಾ ಪ್ರಾಧಿಕಾರ ತಂಡದಿಂದ ಪ್ರತಿನಿಧಿಯಾಗಿ ಭಾಗವಹಿಸಿದ. ಇವರು ಧಾರವಾಡದ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ಕಬ್ಬಡಿ ಅಭ್ಯಾಸ ಮಾಡುತ್ತಿದ್ದು ರಂಗನಾಥ ಎಂಬರಿಂದ ತರಬೇತಿ ಪಡೆಯುತ್ತಿರುವುದಾಗಿದೆ. ಇವರು ಕಡಬ ತಾಲೂಕು ಬಿಳಿನೆಲೆ ಗ್ರಾಮದ ಕೋಟೆ ಬಾಗಿಲು ನವರಾಗಿದ್ದು ಕೆ.ಎಸ್.ಪಿ ವಾಲಿಬಾಲ್ ಆಟಗಾರ್ತಿ ಸಂಧ್ಯಾಮಣಿ ಮತ್ತು ದಿl ಯೋಗೇಶ್ ಕುಮಾರ್ ಅವರ ಪುತ್ರ .










