ಸುಳ್ಯ ಸಿ.ಎ. ಬ್ಯಾಂಕ್ : ಶತಾಬ್ದಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

0

ಸುಳ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ ಇದರ ‘ಎ ತರಗತಿ’ ಸದಸ್ಯರ ಮಕ್ಕಳ ಪೈಕಿ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿ.ಯು.ಸಿಯಲ್ಲಿ 2024-25ನೇ ಸಾಲಿನಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ತಲಾ 10 ವಿದ್ಯಾರ್ಥಿಗಳಿಗೆ ಸಂಘದ ವಾರ್ಷಿಕ ಮಹಾಸಭೆಯಂದು ಗುರುತಿಸಿ ವಿದ್ಯಾರ್ಥಿ ವೇತನ ನೀಡಲು ತೀರ್ಮಾನಿಸಲಾಗಿದೆ. ಅರ್ಹ ವಿದ್ಯಾರ್ಥಿಗಳು ಲಿಖಿತ ಅರ್ಜಿಯನ್ನು ಸಂಘದಿಂದ ಪಡೆದು ದಾಖಲೆಗಳೊಂದಿಗೆ ಸುಳ್ಯದ ಸಿ..ಎ. ಬ್ಯಾಂಕ್ ಪ್ರಧಾನ ಕಛೇರಿಯಲ್ಲಿ 16.08.2025ರೊಳಗಾಗಿ ಸಲ್ಲಿಸಲು ಅವಕಾಶವಿದೆ. ಹೆಚ್ಚಿನ ಮಾಹಿತಿಗೆ ಸಂಘದ ಕಛೇರಿಯನ್ನು ಸಂಪರ್ಕಿಸಲು ಕೋರಿದೆ ಎಂದು ಸಿ.ಎ. ಬ್ಯಾಂಕ್ ಅಧ್ಯಕ್ಷರಾದ ವಿಕ್ರಂ ಅಡ್ಪಂಗಾಯ ತಿಳಿಸಿದ್ದಾರೆ.