








ಸುಳ್ಯದಿಂದ ಆಲೆಟ್ಟಿ ಮಾರ್ಗವಾಗಿ ಬಡ್ಡಡ್ಕ ಕೂರ್ನಡ್ಕಕ್ಕೆ ಜು.14 ರಿಂದ ನೂತನವಾಗಿ ಆರಂಭಗೊಂಡ ಕೆ.ಎಸ್.ಆರ್.ಟಿ.ಸಿ ಬಸ್ಸಿಗೆ ಆಲೆಟ್ಟಿ ಜಂಕ್ಷನ್ ನಲ್ಲಿ ಸ್ಥಳೀಯ ನಾಗರಿಕರು ಹೂವಿನ ಹಾರ ಹಾಕಿ ಸ್ವಾಗತಿಸಿದರು.
ಕಳೆದ ಹಲವಾರು ವರ್ಷಗಳಿಂದ ಈ ರಸ್ತೆಯಲ್ಲಿ ಸರಕಾರಿ ಬಸ್ಸು ಸಂಚಾರವಿಲ್ಲದಿದ್ದು ಇದೀಗ ಬಹು ಜನರ ಬೇಡಿಕೆಯಂತೆ ಮತ್ತೆ ಸರಕಾರಿ ಬಸ್ಸು ಸಂಚಾರ ಪ್ರಾರಂಭಗೊಂಡ ಹಿನ್ನೆಲೆಯಲ್ಲಿ ಸ್ಥಳೀಯ ನಾಗರಿಕರು ಬಸ್ಸಿಗೆ ಹೂವಿನ ಹಾರ ಹಾಕಿ ಚಾಲಕರಿಗೆ ಪುಷ್ಪ ನೀಡಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಆಲೆಟ್ಟಿ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವೀಣಾ ವಸಂತ ಆಲೆಟ್ಟಿ, ಆಲೆಟ್ಟಿ ಸೊಸೈಟಿ ನಿರ್ದೇಶಕ ಸುಧಾಕರ ಆಲೆಟ್ಟಿ, ಜನನಿ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಸತೀಶ್ ಕುಲಾಲ್ ಆಲೆಟ್ಟಿ, ನಿವೃತ್ತ ಯೋಧ ರಾಧಾಕೃಷ್ಣ ರೈ ಆಲೆಟ್ಟಿ, ಮಹಾಬಲ ರೈ ಆಲೆಟ್ಟಿ, ರಾಮಚಂದ್ರ ಆಲೆಟ್ಟಿ, ನವೀನ್ ಕುಮಾರ್ ಆಲೆಟ್ಟಿ, ಕೇಶವ. ಮೊರಂಗಲ್ಲು, ವಿಜಯಕುಮಾರ್ ಆಲೆಟ್ಟಿ, ಯತೀಶ್ ನೂಜಿನಮೂಲೆ,ಪ್ರಜ್ವಲ್ ಪಿ.ಎಸ್ ಆಲೆಟ್ಟಿ, ಅಶ್ವಥ್ ಆಲೆಟ್ಟಿ, ಶರತ್ ಕೆ ಆಲೆಟ್ಟಿ, ರಚನ್ ಆಲೆಟ್ಟಿ, ವಿಷ್ಣು ಪ್ರಸಾದ್ ಗುಂಡ್ಯ, ಧನ್ಯರಾಜ್ ಆಲೆಟ್ಟಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.










