ಪೆರುವಾಜೆ ದೇವಸ್ಥಾನದಲ್ಲಿ ಶ್ರೀ ಗಣಪತಿ ಹೋಮ ಮತ್ತು ಶ್ರೀ ದುರ್ಗಾಪೂಜೆ ಪ್ರಾರಂಭ

0

ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ಗಣಪತಿ ಹೋಮ ಮತ್ತು ಶ್ರೀ ದುರ್ಗಾಪೂಜೆಯು ಜು.17 ರಿಂದ ಪ್ರಾರಂಭಗೊಂಡಿದ್ದು ಸೆ.02 ರವರೆಗೆ ನಡೆಯಲಿದೆ.
ಪ್ರತೀ ದಿನ ಬೆಳಿಗ್ಗೆ ಗಂಟೆ 8.00ಕ್ಕೆ ಗಣಪತಿ ಹೋಮ,ರಾತ್ರಿ ಗಂಟೆ 7.30 ಕ್ಕೆ ದುರ್ಗಾಪೂಜೆ ನಡೆಯಲಿದೆ.


48 ದಿನಗಳ ಕಾಲ ನಡೆಯುವ ಪೂಜೆಯಲ್ಲಿ ಪೂಜೆ ಮಾಡಿಸುವ ಭಕ್ತಾದಿಗಳು ರೂ.300 ನ್ನು ಕಚೇರಿಯಲ್ಲಿ ಪಾವತಿಸಿ ಸೇವಾ ದಿವಸವನ್ನು ಮುಂಚಿತವಾಗಿ ತಿಳಿಸಿ ಶ್ರೀ ಜಲದುರ್ಗಾದೇವಿ ಹಾಗೂ ಉದ್ಭವ ಶ್ರೀ ಮಹಾಗಣಪತಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ದೇವಸ್ಥಾನದ ಆಡಳಿತಾಧಿಕಾರಿ ತಿಳಿಸಿದ್ದಾರೆ.