ಮೊಗ್ರ : ರಕ್ಷಾ ನಾಗರಿಕ ಬಳಗದಿಂದ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ ಹಾಗೂ ಆರ್ಥಿಕ ನೆರವು

0

ಮೊಗ್ರ_ಕಿನ್ನಿಕುಮೇರಿ ಪರಿಸರದಲ್ಲಿ ಸೇವಾ ಸಂಘಟನೆಯಾಗಿ ಕಾರ್ಯ ನಿರ್ವಹಿಸುತ್ತಿರುವ ರಕ್ಷಾ ನಾಗರಿಕ ಬಳಗದ ವತಿಯಿಂದ ಮೊಗ್ರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರವನ್ನು ವಿತರಿಸಲಾಯಿತು.ಸಂಘಟನೆಯ ಅಧ್ಯಕ್ಷರಾದ ಲಯನ್ ನಾಗೇಶ್ ತೆಂಕಪ್ಪಾಡಿಯವರು ಸಮವಸ್ತ್ರ ವಿತರಣಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.

ಕಾರ್ಯದರ್ಶಿ ಜೇಸಿ ಜೀವನ್ ಮಲ್ಕಜೆ, ಕೋಶಾಧಿಕಾರಿ ದಯಾನಂದ ಕಿನ್ನಿಕುಮೇರಿ, ಪದಾಧಿಕಾರಿಗಳಾದ ಲಯನ್ ಕರುಣಾಕರ ಎಣ್ಣೆಮಜಲು, ಉಮೇಶ ಮಕ್ಕಿ, ತಿಮ್ಮಪ್ಪ ಕಿನ್ನಿಕುಮೇರಿ,ವಸಂತ ಬಲ್ಬೇರಿ ಶಾಲಾ ಮುಖ್ಯ ಶಿಕ್ಷಕ ಪರಶಿವ ಮೂರ್ತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಸಂಘಟನೆಯ ಸದಸ್ಯರುಗಳಾದ ಅವಿನಾಶ್ ಮಲ್ಕಜೆ, ಮೋಹನದಾಸ್ ಎಣ್ಣೆಮಜಲು, ಗಣೇಶ ಕಿನ್ನಿಕುಮೇರಿ, ನಾಗೇಶ ಕಿನ್ನಿಕುಮೇರಿ ಬೆಳ್ಯಪ್ಪ ಬಲ್ಬೇರಿ, ವಾಗೀಶ ಮಲ್ಕಜೆ ಶಾಲಾ ಶಿಕ್ಷಕಿಯರಾದ ಸೌಮ್ಯಾ ಮತ್ತು ರಮ್ಯಾ ಹಾಗೂ ಶಾಲಾ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ನಂತರ ಸಂಘಟನೆಯ ಸದಸ್ಯರು ಇತ್ತೀಚೆಗೆ ಕರೆಂಟ್ ಶಾಕ್ ನಿಂದ ನಿಧನರಾದ ಬಡ ಕುಟುಂಬದ ನವೀನ ಮೂವರವರ ಮನೆಗೆ ತೆರಳಿ ಅವರ ಕುಟುಂಬಕ್ಕೆ ಆರ್ಥಿಕ ಧನ ಸಹಾಯ ನೀಡಿದರು.