ಕಾಲೇಜು ಜೀವನ ವಿದ್ಯಾರ್ಥಿಗಳ ಪಾಲಿಗೆ ಬಂಗಾರವಾದ ಜೀವನ ದ ಜೊತೆಗೆ ಬಂಗಾರದಂತ ಅವಕಾಶಗಳು ಲಭಿಸುತ್ತದೆ ಈ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡ ವಿದ್ಯಾರ್ಥಿ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ. ವಿದ್ಯಾರ್ಜನೆಯ ಸಮಯದಲ್ಲಿ ಶ್ರಮಪಟ್ಟು ಸಾಧನೆ ಮಾಡಿದರೆ ಆ ಸಾಧನೆ ಮುದೊಂದು ದಿನ ಬದುಕಿಗೆ ದಾರಿದೀಪವಾಗಬಹುದು. ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸುಳ್ಯ ಇಲ್ಲಿನ ಪ್ರಾಂಶುಪಾಲರಾದ ಸತೀಶ್ ಕುಮಾರ್ ಕೆ ಆರ್ ಹೇಳಿದರು ಅವರು ಜು -28ರಂದು ಕಾಲೇಜಿನ ಸಭಾಂಗಣದಲ್ಲಿ ನಡೆದ ಪ್ರಥಮ ಪದವಿ ತರಗತಿ ಗಳಿಗೆ ನಡೆದ ಅಭಿವಿನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು.










ವೇದಿಕೆಯಲ್ಲಿ ವಿದ್ಯಾರ್ಥಿಕ್ಷೇಮಪಾಲನಾಧಿಕಾರಿ ಉದಯಶಂಕರ ಹೆಚ್, ಐ. ಕ್ಯೂ, ಏ. ಸಿ ಸಂಚಾಲಕರಾದ ಪ್ರೀತಿ ಕೆ ರಾವ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಕನ್ನಡ ಉಪನ್ಯಾಸಕರಾದ ಮಂಜು ಪಿ ಸ್ವಾಗತಿಸಿ, ಇಂಗ್ಲಿಷ್ ಉಪನ್ಯಾಸಕಿ ಅನಿತಾ ವಂದಿಸಿದರು. ಹಿಂದಿ ಉಪನ್ಯಾಸಕರಾದ ರಾಮಕೃಷ್ಣ ಕಾರ್ಯಕ್ರಮ ನಿರೂಪಿಸಿದರು.










