








ಸ್ನೇಹಿತರ ಕಲಾಸಂಘ ಬೆಳ್ಳಾರೆಯ ವತಿಯಿಂದ ಆಗಸ್ಟ್ 15ರಂದು ನಡೆಯುವ ಅಟ್ಟಿ ಮಡಿಕೆ ಮೊಸರು ಕುಡಿಕೆ ಹಾಗೂ ಆಗಸ್ಟ್ 17ರಂದು ನಡೆಯುವ ಶ್ರೀ ಕೃಷ್ಣಜನ್ಮಾಷ್ಟಮಿಯ ಪ್ರಯುಕ್ತ ನಡೆಯುವ ಕಾರ್ಯಕ್ರಮದ ಆಮಂತ್ರಣ ಬಿಡುಗಡೆ ಕಾರ್ಯಕ್ರಮ ಜುಲೈ 30 ರಂದು ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಸ್ನೇಹಿತರ ಕಲಾ ಸಂಘದ ಅಧ್ಯಕ್ಷ ಪದ್ಮನಾಭ ಬೀಡು, ಕಾರ್ಯದರ್ಶಿ ಗಣೇಶ್ ಪಾಟಾಲಿ ಕುರುಂಬುಡೇಲು, ಕೋಶಾಧಿಕಾರಿ ಶ್ರೀನಿವಾಸ ಕುರುಂಬುಡೇಲು, ಉಪಾಧ್ಯಕ್ಷರಾದ ವಸಂತ ಗೌಡ ಪಡ್ಪು, ನಿಕಟ ಪೂರ್ವ ಅಧ್ಯಕ್ಷ ವಸಂತ ಉಲ್ಲಾಸ್, ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕರಾದ ಉದಯಕುಮಾರ್ ಉಪಾಧ್ಯಾಯ, ಜೇಸಿ ಪ್ರದೀಪ್ ಕುಮಾರ್ ರೈ ಪನ್ನೆ, ದೇವಸ್ಥಾನದ ಕಚೇರಿ ವ್ಯವಸ್ಥಾಪಕರಾದ ಮಹೇಶ್ ಕಲ್ಪನೆ, ಸಾಂಸ್ಕೃತಿಕ ಕಾರ್ಯದರ್ಶಿ ಮಹಾಲಿಂಗ ಕುರುಂಬುಡೇಲು, ಪೂರ್ವಾಧ್ಯಕ್ಷರುಗಳಾದ ಕೊರಗಪ್ಪ ನಾಯ್ಕ ಕುರುಂಬುಡೇಲು, ಸಂಜಯ್ ನೆಟ್ಟಾರು ಸದಸ್ಯರುಗಳಾದ ತೀರ್ಥರಾಮ ಮಣಿಮಜಲು, ಸನತ್ ಕಲ್ಲೋಣಿ, ಚಂದ್ರಶೇಖರ ಗೌಡ ಬಸ್ತಿಗುಡ್ಡೆ, ಪ್ರಸಾದ್ ಬೆಳ್ಳಾರೆ ಹಾಗೂ ಊರವರು ಉಪಸ್ಥಿತರಿದ್ದರು.










