ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ದಿನಸಿ ವಿಭಾಗದ ಗುಮಾಸ್ತ ಎಸ್.ರಮೇಶ್ ನಿವೃತ್ತಿ

0


ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ದಿನಸಿ ವಿಭಾಗದ ಗುಮಾಸ್ತ ಎಸ್.ರಮೇಶ್‌ರವರು ಜು.೩೧ ರಂದು ಸೇವಾ ನಿವೃತ್ತಿ ಹೊಂದಿದ್ದಾರೆ. ೧೯೮೬ರಲ್ಲಿ ದಿನಗೂಲಿ ನೌಕರನಾಗಿ ಸೇರಿದ ಇವರು ೧೯೯೧ ರಲ್ಲಿ ಕಾಯಂ ಉದ್ಯೋಗಿಯಾಗಿ ನೇಮಕಗೊಂಡರು. ಆರಂಭದಲ್ಲಿ ಎಂ. ಓ ವಿಭಾಗದಲ್ಲಿ ಕೆಲಸ ಮಾಡಿ, ಬಳಿಕ ಛತ್ರ ವಿಭಾಗ, ಲಾಡು ಕೌಂಟರ್, ವಸತಿ ಗೃಹಗಳ ಪಾರುಪತೆಗಾರನಾಗಿ ಕೆಲಸ ಮಾಡಿದ್ದಾರೆ. ೨೦೧೯ ರಿಂದ ದಿನಸಿ ವಿಭಾಗದ ಗುಮಾಸ್ತನಾಗಿ ಕೆಲಸ ಮಾಡುತಿದ್ದಾರೆ. ಮೂಲತಃ ಕಾಸರಗೋಡಿ ನವರಾಗಿರುವ ಇವರು ೧೯೫೫ ರಲ್ಲಿ ಸುಬ್ರಹ್ಮಣ್ಯಕ್ಕೆ ಬಂದಿದ್ದು ದಿ| ಕೃಷ್ಣಯ್ಯ ಮತ್ತು ದಿ| ಪಾರ್ವತಿ ದಂಪತಿಗಳ ಪುತ್ರ. ಪದವಿ ಪೂರ್ವ ಶಿಕ್ಷಣದ ವರೆಗೆ ಸುಬ್ರಹ್ಮಣ್ಯದಲ್ಲಿ ಪಡೆದು, ಪದವಿ ವಿದ್ಯಾಭ್ಯಾಸವನ್ನು ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಮಾಡಿರುತ್ತಾರೆ.


ಇವರ ಪತ್ನಿ ಶಶಿಕಲಾ ರಾವ್. ಪುತ್ರರಾದ ಶಿಶಿರ್ ಮತ್ತು ಶ್ರೀರಾಜ್ ಬೆಂಗಳೂರಿನಲ್ಲಿ ಖಾಸಗಿ ಉದ್ಯೋಗದಲ್ಲಿದ್ದಾರೆ.