ಗುತ್ತಿಗಾರಿನ ಕಾಲೇಜು ಬಳಿ ಇರುವ ಬಸ್ಸು ತಂಗುದಾಣ ಮುಂಬಾಗದಲ್ಲಿ ಯದ್ವಾತದ್ವಾ ಬೈಕ್ ಪಾರ್ಕಿಂಗ್ ಮಾಡುವ ಘಟನೆ ವರದಿಯಾಗಿದೆ.









ಬೈಕ್ ಗಳ ಪಾರ್ಕಿಗ್ ಸ್ಥಳವಾಗಿ ಮಾರ್ಪಟ್ಟಿದ್ದು ಬಸ್ ನಿಲ್ದಾಣಕ್ಕೆ ಹೋಗಲು ಜಾಗವನ್ನು ಬಿಡದೆ ದಿನಂಪ್ರತಿ ಹೀಗೆ ಪಾರ್ಕಿಂಗ್ ಮಾಡುತಿರುವುದಾಗಿ ತಿಳಿದು ಬಂದಿದೆ.
ಶಾಲಾ ಮಕ್ಕಳಿಗೆ ಪ್ರಯಾಣಿಕರಿಗೆ ಇದರಿಂದ ತೊಂದರೆ ಉಂಟಾಗಿದ್ದು ಬೈಕ್ ಪಾರ್ಕಿಂಗ್ ದಾರರು ಪ್ರಯಾಣಿಕರಿಗೆ ತೊಂದರೆ ಆಗದಂತೆ ತಂಗುದಾಣಕ್ಕೆ ಹೋಗಲು ಜಾಗ ಬಿಟ್ಟು ಮುಂಜಾಗ್ರತೆ ವಹಿಸುವಂತೆ ಕೋರಲಾಗಿದೆ.










