ಜಮೀಯ್ಯತುಲ್ ಫಲಾಹ್ ಸುಳ್ಯ ತಾಲೂಕು ಘಟಕ ದ 2024-25ನೇ ಸಾಲಿನ ಮಹಾಸಭೆ ಯು ಆ.7ರಂದು ಸುಳ್ಯ ಜಮೀಯ್ಯತುಲ್ ಫಲಾಹ್ ಕಛೇರಿಯ ಹತ್ತಿರದ ಅನ್ಸಾರ್ ಸಭಾಂಗಣದಲ್ಲಿ ನಡೆಯಿತು.
ಕೇಂದ್ರ ಘಟಕದಿಂದ ನೇಮಿಸಲ್ಪಟ್ಟ ವೀಕ್ಷಕರಾಗಿ ಬೆಳ್ತಂಗಡಿ ಘಟಕದ ಪ್ರಧಾನ ಕಾರ್ಯದರ್ಶಿ ಅಲಿಯಬ್ಬ ಪುಲಾಬೆ ಹಾಗೂ ಪುತ್ತೂರು ಘಟಕದ ಪ್ರಧಾನ ಕಾರ್ಯದರ್ಶಿ ಅಬ್ಬುಲ್ ರಹಿಮಾನ್ ಯುನಿಕ್ ಭಾಗವಹಿಸಿದ್ದರು. ಅಧ್ಯಕ್ಷರಾದ ಅಬೂಬಕ್ಕರ್ ಪಾರೆಕಲ್ಲು ರವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.









ಗತ ವರ್ಷದ ವಾರ್ಷಿಕ ವರದಿಯನ್ನು ಕಾರ್ಯದರ್ಶಿ ಮೂಸ ಕುಂಞಿ ಪ್ಟೆಂಬಚ್ಚಾಲ್ ಹಾಗೂ ಲೆಕ್ಕಪತ್ರವನ್ನು ಎಡ್ವಕೇಟ್ ಅಬೂಬಕ್ಕರ್ ಜೆ.ಎನ್. ಅವರು ಮಂಡಿಸಿದರು.
ಒಟ್ಟು 41 ಆಜೀವ ಸದಸ್ಯರಿರುವ ಸುಳ್ಯ ಘಟಕದಲ್ಲಿ ಮಹಾಸಭೆಗೆ 25 ಸದಸ್ಯರು ಭಾಗವಹಿಸಿದರು. ಅದರಲ್ಲಿ 21 ಸದಸ್ಯರನ್ನು ಅವಿರೋಧವಾಗಿ ಆರಿಸಲಾಯಿತು. ಆ 21 ಸದಸ್ಯರಲ್ಲಿ 8 ಮಂದಿ ಪದಾಧಿಕಾರಿಗಳನ್ನೂ ಅವಿರೋಧ ಪ್ರಕ್ರಿಯೆಯಲ್ಲಿ ಆಯ್ಕೆ ಮಾಡಲಾಯಿತು.
ನೂತನ ಪದಾಧಿಕಾರಿಗಳು 2025-27 ಸಾಲಿನ ನೂತನ
ಅಧ್ಯಕ್ಷರಾಗಿ ಮೂಸ ಕುಂಞಿ ಪೈಂಬಚ್ಚಾಲ್, ಕಾರ್ಯದರ್ಶಿಯಾಗಿ ಹಸೈನಾರ್ ವಲಳಂಬೆ,
ಕೋಶಾಧಿಕಾರಿ ಶಾಫಿ ಕುತ್ತಮೊಟ್ಟೆ,
ಉಪಾಧ್ಯಕ್ಷರಾಗಿ ಹಾಜಿ ಇಬ್ರಾಹಿಂ ಕತ್ತಾರ್, ಉಪಾಧ್ಯಕ್ಷರಾಗಿ ಅಬ್ಬುಲ್ ಖಾದರ್ ಸಂಗಮ್, ಜೊತೆ ಕಾರ್ಯದರ್ಶಿ ಅಮೀರ್ ಶುಕ್ಕುಂಬಳ, ಸಂಘಟನಾ ಕಾರ್ಯದರ್ಶಿಯಾಗಿ ಅಬೂಬಕ್ಕರ್ ಜೆ.ಎನ್., ಪತ್ರಿಕಾ ಕಾರ್ಯದರ್ಶಿಯಾಗಿ ಹಂಝ ಅಜ್ಮೀರಿಯ, ಸದಸ್ಯರುಗಳಾಗಿ
ಅಬೂಬಕ್ಕರ್ ಪಾರೆಕಲ್ಲು,
ಇಕ್ಬಾಲ್ ಎಲಿಮಲೆ,
ಅಬ್ಯಾಸ್ ಸೆಂಟ್ಯಾರ್,
ಡಾ. ಮಹಮ್ಮದ್ ಕುಂಬಕ್ಕೋಡ್,
ಹಸೈನಾರ್ ಹಾಜಿ ಗೋರಡ್ಕ,
ಜುಬೈರ್,
ಹನೀಫ್ ಎಸ್.ಕೆ.,
ಹಂಝ ದುಗಲಡ್ಕ,
ಇಬ್ರಾಹಿಂ ನೀರಬಿದಿರೆ,
ರಜಾಕ್ ಎಣ್ಮೂರು,
ಮಹಮ್ಮದ್ ಫವಾಜ್,
ಮುಸ್ತಾಪ ಜನತಾ,
ಅಬೂಬಕ್ಕರ್ ಎಸ್.ಪಿ. ಆಯ್ಕೆಯಾದರು.










