







ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ನಿಂತಿಕಲ್ಲು ವಲಯದ ಕುಕ್ಕಾಯಕೋಡಿ ಎಂಬಲ್ಲಿ ವಾಸವಾಗಿರುವ ತೀರಾ ಸಂಕಷ್ಟದಲ್ಲಿರುವ ಯೋಜನೆಯ ಸದಸ್ಯರಾದ ಬಾಬು ರೈ ಮತ್ತು ದೆಯ್ಯಕ್ಕು ದಂಪತಿಗೆ ಮಾಶಾಸನ ಮಂಜೂರುಗೊಂಡಿದೆ.ತಿಂಗಳಿಗೆ 2000 ದಂತೆ ಜೀವನ ಪರ್ಯಂತ ಆಧಾರವಾಗಿ ಈ ಮಾಶಾಸನ ದೊರೆಯಲಿದ್ದು, ಈ ಮಂಜೂರಾತಿ ಕೈಪಿಡಿಯನ್ನು ಸಾಮಾಜಿಕ ಧುರೀಣ ಸುಧೀರ್ ಕುಮಾರ್ ಶೆಟ್ಟಿ ಕುಕ್ಕಯಕೋಡಿ ಹಾಗೂ ವಲಯ ಅಧ್ಯಕ್ಷರಾದ ವಸಂತಗೌಡ, ಮೇಲ್ವಿಚಾರಕಿ ಶ್ರೀಮತಿ ಸವಿತಾ ಶೆಟ್ಟಿ, ತಾಲೂಕು ಜ್ಞಾನ ವಿಕಾಸ ಸಮನ್ವಯಾಧಿಕಾರಿ ಶ್ರೀಮತಿ ಲಕ್ಷ್ಮಿ ಹಾಗೂ ನಿಂತಿ ಕಲ್ಲು ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿಯಾದ ಶ್ರೀಮತಿ ಲೀಲಾವತಿಯವರು ವಿತರಿಸಿದರು.










