ರಾಮ ಮತ್ತು ಕೃಷ್ಟರ ಅವತಾರ ದಲ್ಲಿ ವಿಶೇಷತೆಯಿದೆ. ಶ್ರೀ ರಾಮ ಆದರ್ಶ ವ್ಯಕ್ತಿಯಾಗಿದ್ದ. ಕೃಷ್ಣನ ವ್ಯಕ್ತಿತ್ವ ದೊಡ್ಡದು. ಈ ಎರಡೂ ವ್ಯಕ್ತಿಗಳೂ ಧರ್ಮ ರಕ್ಷಣೆಯಲ್ಲಿ ತೂಡಗಿಸಿಕೊಂಡು ಬಂದವರಾಗಿದ್ದಾರೆ ಎಂದು ಆನೇಕಾರ್ ಗಣಪಯ್ಯ ಹೇಳಿದರು.








ಅವರು ಆ. 17ರಂದು ಸಾರ್ವಜನಿಕ ಶ್ರೀ ಕೃಷ್ಣ ಸೇವಾ ಸಮಿತಿ ಆಶ್ರಯದಲ್ಲಿ ಶೇಣಿ ಸ.ಹಿ.ಪ್ರಾ. ಶಾಲಾ ಆವರಣದಲ್ಲಿ
ನಡೆದ 22ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ಶ್ರೀ ಸತ್ಯನಾರಾಯಣ ದೇವರ ಪೂಜೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಅತಿಥಿ ನೆಲೆಯಲ್ಲಿ ಮಾತನಾಡಿದರು. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಸೃಜನ್ ಶೇಣಿ ವಹಿಸಿದ್ದರು.
ಅಥಿತಿಗಳಾಗಿ ಸಮರ್ಪಣಾ ಟ್ರಸ್ಟ್ ನೇಣಾರು ಇದರ ಸಂಚಾಲಕರಾದ ಪಾರ್ವತಿ ನೇಣಾರು, ಪುರೋಹಿತ ಮುರಳಿ ಕೃಷ್ಣ ಮಾಡಾವು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಧರ್ಮಪಾಲ ಶೇಣಿ ಸ್ವಾಗತಿಸಿ, ವಿಶ್ವನಾಥ ಮೋಟುಕಾನ ವಂದಿಸಿದರು. ಅಭಿಜ್ಞಾ ನಾಟಿಕೇರಿ ಕಾರ್ಯಕ್ರಮ ನಿರೂಪಿಸಿದರು. ಉದ್ಘಾಟನೆಯ ಬಳಿಕ ಮಕ್ಕಳಿಗೆ, ಪುರುಷರಿಗೆ, ಮಹಿಳೆಯರಿಗೆ ವಿವಿಧ ಕ್ರೀಢಾ ಸ್ಪರ್ಧೆಗಳು ನಡೆಯಲಿದೆ. ಸಂಜೆ ಸಮಾರೋಪ ಮತ್ತು ಬಹುಮಾನ ವಿತರಣೆ ನಡೆಯಲಿದೆ.










