ಶೇಣಿ; ಮನೆಯ ಅಂಗಳಕ್ಕೆ ಬಿದ್ದ ರಿಕ್ಷಾ- ಸಂಪೂರ್ಣ ಜಖಂ

0

ಅಮರ ಪಡ್ನೂರು ಗ್ರಾಮದ ಶೇಣಿ ಎಂಬಲ್ಲಿ ರಿಕ್ಷಾವೊಂದು ಚಾಲಕನ ನಿಯಂತ್ರಣ ತಪ್ಪಿ ಮನೆಯೊಂದರ ಅಂಗಳಕ್ಕೆ ಬಿದ್ದ ಘಟನೆ ಇಂದು ವರದಿಯಾಗಿದೆ.

ಕುಕ್ಕುಜಡ್ಕದ ಭಾಸ್ಕರ ಆಚಾರ್ಯ ಎಂಬವರು ಚಲಾಯಿಸಿಕೊಂಡು ಬಂದ ರಿಕ್ಷಾ ಕುಳ್ಳಾಜೆ ವೆಂಕಟ್ರಮಣ ಭಟ್ ರವರ ಅಂಗಳಕ್ಕೆ ಪಲ್ಟಿಯಾಗಿದೆ. ಪರಿಣಾಮವಾಗಿ ರಿಕ್ಷಾ ಸಂಪೂರ್ಣ ನಜ್ಜುಗುಜ್ಜಾಗಿದ್ದು,ರಿಕ್ಷಾ ಚಾಲಕರೊಬ್ಬರೇ ಇದ್ದು ಅವರಿಗೂ ಗಾಯವಾಗಿರುವುದಾಗಿ ತಿಳಿದು ಬಂದಿದೆ.