ಮರ್ಕಂಜ ಗ್ರಾಮ ಪಂಚಾಯತ್ ವತಿಯಿಂದ ಗ್ರಾಮ ವ್ಯಾಪ್ತಿಯಲ್ಲಿ ಸ್ವಚ್ಚತಾ ಕಾರ್ಯಕ್ರಮ

0

ಮರ್ಕಂಜ ಗ್ರಾಮ ಪಂಚಾಯತ್ ವತಿಯಿಂದ ಗ್ರಾಮ ವ್ಯಾಪ್ತಿಯಲ್ಲಿ ಸ್ವಚ್ಚತಾ ಕಾರ್ಯಕ್ರಮ ನಡೆಯಿತು.

ರಸ್ತೆ ಬದಿ ಕಸ ಹೆಕ್ಕಿ ಪರಿಸರ ದಿನಾಚರಣೆ ಹಾಗೂ ಒಂದು ದಿನ ಒಂದು ಘಂಟೆ ಸಾಮೂಹಿಕ ಶ್ರಮದಾನ ಕಾರ್ಯಕ್ರಮದ ಮೂಲಕ ಸ್ವಚ್ಚತೆಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು,ಸದಸ್ಯರು ಸಿಬ್ಬಂದಿಗಳು, ಪಂಚಶ್ರೀ ಸಂಜೀವಿನಿ ಸ್ವ ಸಹಾಯ ಸಂಘದ ಸದಸ್ಯರು ಅರೋಗ್ಯ ಇಲಾಖೆಯವರು ಆಶಾ ಕಾರ್ಯಕರ್ತೆಯರು ಗಜಾನನ ಯುವತಿ ಮಂಡಲದ ಸದಸ್ಯೆಯರು ಧ ಸ್ವ ಸಹಾಯ ಸಂಘಗಳ ಸದಸ್ಯರು ಭಾಗವಹಿಸಿದ್ದರು. ಸ್ವಚ್ಚತೆಯ ಬಳಿಕ ಗ್ರಾಮ ಪಂಚಾಯತ್ ವತಿಯಿಂದ ಲಘು ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.