ಕನಕಮಜಲು ಪಿಡಿಒ ಸರೋಜಿನಿ ಬೀಳ್ಕೊಡುಗೆ

0

ಕನಕಮಜಲು ಗ್ರಾಮ ಪಂಚಾಯತ್ ನಲ್ಲಿ 9 ವರ್ಷಗಳ ಕಾಲ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಸೇವೆ ಸಲ್ಲಿಸಿ ಇದೀಗ ನೆಲ್ಲೂರು ಕೆಮ್ರಾಜೆ ಗ್ರಾಮ ಪಂಚಾಯತ್ ಗೆ ವರ್ಗಾವಣೆಗೊಂಡಿರುವ ಶ್ರೀಮತಿ ಸರೋಜಿನಿ ಬಿ.ಯವರಿಗೆ ಕನಕಮಜಲು ಗ್ರಾಮ ಪಂಚಾಯತ್ , ವಿವಿದ ಸಂಘ ಸಂಸ್ಥೆಗಳ ಹಾಗೂ ಗ್ರಾಮಸ್ಥರ ಪರವಾಗಿ ಬೀಳ್ಕೊಡುಗೆ ಸಮಾರಂಭವನ್ನು ಅ.14ರಂದು ನಡೆಸಲಾಯಿತು.

ಸರೋಜಿನಿಯವರು ಕನಕಮಜಲು ಪಿಡಿಒ ಆಗಿದ್ದ ಸಂದರ್ಭದಲ್ಲಿ 2016-17ರಲ್ಲಿ “ನಮ್ಮಗ್ರಾಮ ನಮ್ಮ ಯೋಜನೆ” ಗ್ರಾಮಾಭಿವೃದ್ಧಿಯ ಮುನ್ನೋಟ ಯೋಜನೆಯನ್ನು ಅತ್ಯುತ್ತಮವಾಗಿ ಅನುಷ್ಠಾನಗೊಳಿಸಿದಕ್ಕೆ ರಾಜ್ಯ ಪ್ರಶಸ್ಥಿ, 2019-20ನೇ ಸಾಲಿನಲ್ಲಿ ” ನಾನಾಜಿ ದೇಶ್ಮುಖ್ ರಾಷ್ಟ್ರೀಯ ಗೌರವ ಗ್ರಾಮ ಸಭಾ ಪುರಸ್ಕಾರ” ಹಾಗೂ ಸ್ವಚ್ಚತಾ ಅಭಿಯಾನ ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಬಹುಮಾನ ಹೀಗೆ ಹಲವು ಗೌರವಗಳಿಗೆ ಕನಕಮಜಲು ಗ್ರಾಮ ಪಾತ್ರವಾಗಿದೆ.

ಬೀಳ್ಕೊಡುಗೆ ಕಾರ್ಯಕ್ರಮವನ್ನು ಗ್ರಾ.ಪಂ ಅಧ್ಯಕ್ಷರಾದ ಶ್ರೀಮತಿ ಶಾರದಾ ಉಗ್ಗಮೂಲೆ ಉದ್ಘಾಟಿಸಿದರು.
ಗ್ರಾ.ಪಂ.ನ ಪ್ರಭಾರ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಬಾಬು ನಾಯ್ಕ ಎಮ್ ಸ್ವಾಗತಿಸಿದರು.
ದಾಮೋದರ ಗೌಡ ಕೋಡ್ತಿಳು ಅಭಿನಂದನಾ ಮಾತನ್ನಾಡಿದರು.

ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶ್ರೀಧರ ಕುತ್ಯಾಳ,
ಮಾಜಿ ಗ್ರಾ.ಪಂ ಅಧ್ಯಕ್ಷರಾದ ಗೋಪಾಲಕೃಷ್ಣ ಕುತ್ಯಾಳ, ಶ್ರೀ ವಸಂತ ಗಬ್ಬಲಡ್ಕ, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀಮತಿ ಗುಣವತಿ ಕೊಲ್ಲಂತಡ್ಕ ತಮ್ಮ ಅನಿಸಿಕೆ ವ್ಯಕ್ತಪಡಿಸಿ ಶುಭಹಾರೈಸಿದರು.

ವರ್ಗಾವಣೆಗೊಂಡ ಶ್ರೀಮತಿ ಸರೋಜಿನಿ.ಬಿ ಅವರು ಮಾತನಾಡಿ ತನ್ನ ಸೇವಾವಧಿಯಲ್ಲಿ ಅಭೂತಪೂರ್ವ ಸಹಕಾರ ನೀಡಿದ ಗ್ರಾ.ಪಂ ಆಡಳಿತ ಮಂಡಳಿ ಸದಸ್ಯರಿಗೆ, ಸ್ಥಳೀಯ ಸಂಘಸಂಸ್ಥೆಯ ಪ್ರತಿನಿಧಿಗಳಿಗೆ, ಹಾಗೂ ಅಧಿಕಾರಿಗಳಿಗೆ, ಗ್ರಾಮಸ್ಥರಿಗೆ ವಿಶೇ಼ವಾಗಿ ಗ್ರಾ.ಪಂ ಪಂಚಾಯತ್ ಸಿಬ್ಬಂದಿವರ್ಗದವರಿಗೆ ಅಭಿನಂದನೆ ಸಲ್ಲಿಸಿ ಮುಂದೆ ಅವಕಾಶ ಸಿಕ್ಕಿದಲ್ಲಿ ಅಧಿಕಾರಿಯಾಗಿ ಈ ಗ್ರಾ.ಪಂ ನಲ್ಲಿ ಕರ್ತವ್ಯ ನಿರ್ವಹಿಸಲು ಸದಾ ಸಿದ್ದಳಿರುವುದಾಗಿ ತಿಳಿಸಿದರು. ಗ್ರಾ.ಪಂ ಸಿಬ್ಬಂದಿ ಕೆ ಪ್ರಭಾಕರ ಇವರು ಅಭಿನಂದನಾ ಪತ್ರವನ್ನು ವಾಚಿಸಿ ಲವಕುಮಾರ ಇವರು ಧನ್ಯವಾದ ಸಲ್ಲಿಸಿದರು