ಸುಳ್ಯ ಸರ್ಕಾರಿ ಪದವಿ ಪೂರ್ವ ಕಾಲೇಜು ಅಮೃತ ಮಹೋತ್ಸವದ ಅಂಗವಾಗಿ ಸುಳ್ಯ ಪಾಟಾಳಿ ಯಾನೆ ಗಾಣಿಗ ಸಮಾಜ ಸೇವಾ ಸಂಘದ ವತಿಯಿಂದ ಶ್ರಮದಾನ

0

ಸುಳ್ಯ ಸರ್ಕಾರಿ ಪದವಿ ಪೂರ್ವ ಕಾಲೇಜು ಇದರ ಅಮೃತ ಮಹೋತ್ಸವದ ಅಂಗವಾಗಿ ನಡೆಯುತ್ತಿರುವ ಶ್ರಮದಾನ ಕಾರ್ಯಕ್ರಮದ 8 ನೇ ವಾರದ ಶ್ರಮದಾನವು ಸುಳ್ಯ ತಾಲೂಕು ಪಾಟಳಿ ಯಾನೆ ಗಾಣಿಗ ಸಮಾಜ ಸೇವಾ ಸಂಘ ರಿ ವತಿಯಿಂದ ನವಂಬರ್ 9ರಂದು ಶಾಲಾ ಪರಿಸರದಲ್ಲಿ ನಡೆಯಿತು.

ಶ್ರಮದಾನದ ನೇತೃತ್ವವನ್ನು ಸಮಿತಿಯ ಅಧ್ಯಕ್ಷರಾದ ವೆಂಕಟ್ರಮಣ ಬೇರ್ಪಡ್ಕ ವಹಿಸಿದ್ದರು.ಸುಮಾರು ಮೂವತ್ತಕ್ಕೂ ಹೆಚ್ಚು ಸದಸ್ಯರುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಶಾಲಾ ಪರಿಸರವನ್ನು ಸ್ವಚ್ಛತೆಗೊಳಿಸುವ ಕಾರ್ಯ ನಡೆಸಿದರು.


ಈ ಸಂಧರ್ಭದಲ್ಲಿ ಸಮಿತಿಯ ಕಾರ್ಯದರ್ಶಿ ಸಂಜಯ್ ನೆಟ್ಟಾರ್, ಹಾಗೂ ಪ್ರಮುಖರಾದ ಚಂದ್ರಶೇಖರ ಉದಂತಡ್ಕ, ರಾಧಾಕೃಷ್ಣ ಬೇರ್ಪಡ್ಕ,ಬಾಲಚಂದ್ರ ಅಡ್ಕಾರ್,ಶಂಕರ ಜಯನಗರ, ಮತ್ತು ಸಂಘದ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರುಗಳು,ಶಾಲಾ ಎಸ್ ಡಿ ಎಂ ಸಿ ಸದಸ್ಯರಾದ ಶ್ರೀಮತಿ ವಿಶಾಲಾಕ್ಷಿ ಅಜ್ಜಾವರ , ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಪಿ ಬಿ ಸುಧಾಕರ್ ರೈ, ಅಮೃತ ಮಹೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಮ್ ಬಿ ಸದಾಶಿವ, ಕೋಶಾಧಿಕಾರಿ ರಾಮಚಂದ್ರ ಪಲ್ಲತಡ್ಕ, ಉಪ ಪ್ರಾಂಶುಪಾಲರಾದ ಪ್ರಕಾಶ್ ಮೂಡಿತ್ತಾಯ, ಶಿಕ್ಷಕರುಗಳಾದ ಶ್ರೀಮತಿ ಮಮತಾ ಎಂ, ಶ್ರೀಮತಿ ಪೂರ್ಣಿಮಾ ಶ್ರೀಮತಿ ಚಂದ್ರಾವತಿ ಪ್ರಜ್ವಲ್, ಮೊದಲಾದವರು ಭಾಗವಹಿಸಿದ್ದರು.