ಅಧ್ಯಕ್ಷ: ಅನೂಪ್ ಪೈ, ಕಾರ್ಯದರ್ಶಿ : ಜನಾರ್ಧನ ದೋಳ, ಖಜಾಂಜಿ: ಶರತ್ ಕುಡೆಕಲ್ಲು
ಪದಪ್ರಧಾನ ಸಮಾರಂಭ ಹಾಗೂ ಕುಟುಂಬ ಮಿಲನ ಕಾರ್ಯಕ್ರಮ

ಹಿಂದೂ ಇಕಾನಾಮಿಕ್ ಫೋರಂ ಸುಳ್ಯ ಘಟಕದ 2025-26 ನೇ ಸಾಲಿನ ನೂತನ ಪದಾಧಿಕಾರಿಗಳ ಪದ ಪ್ರಧಾನ ಸಮಾರಂಭ ಹಾಗೂ ಕುಟುಂಬ ಮಿಲನ ಕಾರ್ಯಕ್ರಮ ನ. 9 ರಂದು ಅಂಬಟೆಡ್ಕ ವೆಂಕಟರಮಣ ದೇವ ಮಂದಿರದ ಶ್ರೀ ಶ್ರೀನಿವಾಸ ಪದ್ಮಾವತಿ ಸಭಾ ಭವನದಲ್ಲಿ ನಡೆಯಿತು.








ಸುಳ್ಯ ಘಟಕದ ಅಧ್ಯಕ್ಷ ಶರತ್ ಕಲ್ಲುಗುಂಡಿ ಯವರು ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅಭ್ಯಾಗತರಾಗಿ ಉದಯವಾಣಿ ಪತ್ರಿಕೆಯ
ನಿವೃತ್ತ ಉಪಸಂಪಾದಕರಾದ ಎಸ್. ನಿತ್ಯಾನಂದ ಪಡ್ರೆ ಯವರು ದೀಪ ಪ್ರಜ್ವಲಿಸಿ ಶುಭ ಹಾರೈಸಿದರು.
ಪುತ್ತೂರು ಘಟಕದ ಸ್ಥಾಪಾಕಾಧ್ಯಕ್ಷ ಕೃಷ್ಣ ಮೋಹನ್ ಪುತ್ತೂರು, ಮುಳ್ಳೇರಿಯಾ ಘಟಕದ ಸ್ಥಾಪಕಧ್ಯಕ್ಷ ಶಶಿಧರ,
ಸುಳ್ಯ ಘಟಕದ ಸ್ಥಾಪಕಾಧ್ಯಕ್ಷ ಕೇಶವ ನಾಯಕ್, ಪ್ರಸ್ತುತ ಸಾಲಿನ ಅಧ್ಯಕ್ಷ ಅನೂಪ್ ಕಮಲಾಕ್ಷ ಪೈ,ಉಪಾಧ್ಯಕ್ಷ ಅಶ್ವಥ್ ಬಿಳಿಮಲೆ, ಕಾರ್ಯದರ್ಶಿ ಜನಾರ್ದನ ದೋಳ, ಖಜಾಂಜಿ ಶರತ್ ಕುಡೆಕಲ್ಲು, ಜತೆ ಕಾರ್ಯದರ್ಶಿ ಗುರುರಾಜ್ ಅಲೆಟ್ಟಿ, ಮಧುಕಿರಣ್ ಎಂ. ಎ
ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳಿಗೆ ಕೃಷ್ಣ ಮೋಹನ್ ರವರು ಪ್ರತಿಜ್ಞಾ ವಿಧಿ ಬೋಧಿಸಿದರು. ಪೈಚಾರಿನಲ್ಲಿ ಗಣೇಶ್ ಕ್ಲಿನಿಕ್ ನಡೆಸುತ್ತಿರುವ ಖ್ಯಾತ ವೈದ್ಯರಾದ ಡಾ. ಸುಬ್ರಹ್ಮಣ್ಯ ಭಟ್ ರವರನ್ನು
ಸನ್ಮಾನಿಸಲಾಯಿತು. ಯುವ ಸಾಧಕರುಗಳಾದ ಡಾ. ಆದರ್ಶ್ ಮತ್ತು ಅಖಿಲ್ ಕೆ. ಎಸ್ ರವರನ್ನು ಘಟಕದ ವತಿಯಿಂದ ಅಭಿನಂದಿಸಲಾಯಿತು.
ಹೆಚ್.ಇ. ಎಫ್
ಕುಟುಂಬದ ಸದಸ್ಯರಿಗೆ ಹಮ್ಮಿಕೊಂಡ ವಿವಿಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಅಶ್ವಥ್ ಬಿಳಿಮಲೆ ಸ್ವಾಗತಿಸಿ, ಜನಾರ್ಧನ ದೋಳ ವಂದಿಸಿದರು. ಸೂರ್ಯ ನಾರಾಯಣ ಪ್ರಭು, ಮಧುಕಿರಣ್ ಕೆ ರವರು ಸನ್ಮಾನ ಪತ್ರ ವಾಚಿಸಿದರು.
ಬಾಲು ರಾಮಚಂದ್ರ ಮತ್ತು ಚಿದಾನಂದ ಪರಿವಾರಕನ ಕಾರ್ಯಕ್ರಮ ನಿರೂಪಿಸಿದರು.
ಸಭೆಯ ಬಳಿಕ ಸಾಂಸ್ಕೃತಿಕ ಮನರಂಜನಾ ಕಾರ್ಯಕ್ರಮ ನಡೆಯಿತು. ಸಹಭೋಜನದ ವ್ಯವಸ್ಥೆ ಮಾಡಲಾಗಿತ್ತು.










