ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆ : ಅಡ್ಪಂಗಾಯ, ಮೋಟುಕಾನ ಗೆಲುವು

0

ಕಲ್ಲಪಳ್ಳಿ ಪರಾಭವ ಅಧ್ಯಕ್ಷ ಪುಷ್ಪರಾಜ್ ಬಿ.ಎನ್., ಶ್ರೀನಿವಾಸ್ ಇಂದಾಜೆ ರಾಜ್ಯ ಸಮಿತಿಗೆ

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿಣಿ ಸಮಿತಿಗೆ ನ.೯ ರಂದು ನಡೆದ ಚುನಾವಣೆಯಲ್ಲಿ ಸುಳ್ಯದ ಗಿರೀಶ್ ಅಡ್ಪಂಗಾಯ ಹಾಗೂ ಹರೀಶ್ ಮೋಟುಕಾನ ಗೆಲುವು ಸಾಧಿಸಿದ್ದಾರೆ. ಸಂಘದ ಜಿಲ್ಲಾಧ್ಯಕ್ಷರಾಗಿ ಪುಷ್ಪರಾಜ್ ಬಿ.ಎನ್. ಹಾಗೂ ರಾಜ್ಯ ಸಮಿತಿ ಸದಸ್ಯರಾಗಿ ಶ್ರೀನಿವಾಸ ನಾಯಕ್ ಇಂದಾಜೆ ಆಯ್ಕೆಯಾಗಿದ್ದಾರೆ.
ಜಿಲ್ಲಾ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ವಿಜಯವಾಣಿ ಪತ್ರಿಕೆಯ ಸುಳ್ಯ ವರದಿಗಾರ ಹಾಗೂ ದ ಸುಳ್ಯ ಮಿರರ್ ವೆಬ್‌ಸೈಟ್‌ನ ಸಂಪಾದಕ ಗಂಗಾಧರ್ ಕಲ್ಲಪಳ್ಳಿಯವರು ೧೨೬ ಮತ ಪಡೆದು ಪರಾಭವಗೊಂಡರೆ, ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿದ ಸುಳ್ಯದ ವಾರ್ತಾಭಾರತಿ ಪತ್ರಿಕೆಯ ವರದಿಗಾರ ಗಿರೀಶ್ ಅಡ್ಪಂಗಾಯರು ೧೪೧ ಮತಗಳನ್ನು ಹಾಗೂ ವಿಜಯವಾಣಿ ಪತ್ರಿಕೆಯ ಮಂಗಳೂರು ವರದಿಗಾರ, ಸುಳ್ಯ ತಾಲೂಕು ಕಳಂಜ ಗ್ರಾಮದ ಮೋಟುಕಾನ ನಿವಾಸಿ ಹರೀಶ್ ಮೋಟುಕಾನರು ೧೮೬ ಮತ ಪಡೆದು ಗೆಲುವು ಸಾಧಿಸಿದ್ದಾರೆ.
ಸಂಘದ ಜಿಲ್ಲಾಧ್ಯಕ್ಷತೆಗೆ ಸ್ಪರ್ಧಿಸಿದ್ದ ಪುಷ್ಪರಾಜ್ ಬಿ.ಎನ್. ೧೮೭ ಮತ ಪಡೆದು ಅಧ್ಯಕ್ಷರಾಗಿ ಆಯ್ಕೆಯಾದರೆ, ರಾಜ್ಯ ಕಾರ್ಯಕಾರಿಣಿಗೆ ಸ್ಪರ್ಧಿಸಿದ್ದ ಶ್ರೀನಿವಾಸ್ ನಾಯಕ್ ಇಂದಾಜೆ ೨೧೦ ಮತ ಪಡೆದು ಗೆದ್ದಿದ್ದಾರೆ.
ನ.೯ ರಂದು ಮಂಗಳೂರಿನ ವಾರ್ತಾಭವನದಲ್ಲಿ ನೂತನ ಸಮಿತಿಗೆ ಚುನಾವಣೆ ನಡೆಯಿತು. ಬೆಳಗ್ಗೆ ೯ ಗಂಟೆಯಿಂದ ಆರಂಭಗೊಂಡ ಮತದಾನ ಮಧ್ಯಾಹ್ನ ೩ ಗಂಟೆ ವರೆಗೆ ನಡೆಯಿತು. ಬಳಿಕ ಮತ ಎಣಿಕೆ ನಡೆದು ರಾತ್ರಿ ಫಲಿತಾಂಶ ಘೋಷಿಸಲ್ಪಟ್ಟಿತು.