ಸುಳ್ಯದ ಹೆಸರಾಂತ ಮೊಬೈಲ್ ಮಳಿಗೆ ಸೃಷ್ಠಿ ಫ್ಯಾನ್ಸಿ & ಮೊಬೈಲ್ ಮಳಿಗೆಯಲ್ಲಿ ಹಬ್ಬಗಳ ಸಂಭ್ರಮದಲ್ಲಿ ಗ್ರಾಹಕರಿಗೆ ಪ್ರತಿ ಖರಿದಿಗೆ ಉಚಿತ ಅದೃಷ್ಟ ಕೂಪನ್ ಯೋಜನೆಯನ್ನು ಹಮ್ಮಿಕೊಂಡಿದ್ದು ಅದರ ಡ್ರಾ ಫಲಿತಾಂಶ ಡಿ.೧೩ ರಂದು ಸೃಷ್ಟಿ ಫ್ಯಾನ್ಸಿಯಲ್ಲಿ ನಡೆಯಿತು. ಡ್ರಾ ಫಲಿತಾಂಶವನ್ನು ರೋಟರಿ ಅಧ್ಯಕ್ಷ ರೊ.ಡಾ.ರಾಮಮೋಹನ್ರವರು ನಡೆಸಿಕೊಟ್ಟರು.
ಡಾ.ರಾಮಮೋಹನ್ ರವರ ಪುತ್ರಿ ಐಶಾನಿ ಅದೃಷ್ಟ ಚೀಟಿ ಎತ್ತುವ ಮೂಲಕ ಅದೃಷ್ಟ ಗ್ರಾಹಕರನ್ನು ಆಯ್ಕೆ ಮಾಡಿದರು.









ಈ ಸಂದರ್ಭದಲ್ಲಿ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಅಧ್ಯಕ್ಷ ಯಶ್ವಿತ್ ಕಾಳಂಮನೆ, ಮಹಾದೇವ ಪ್ಲವರ್ ಸ್ಟಾಲ್ ಮಾಲಕ ಮಾಧವ ಮಂಗಲ್ಪಾಡಿ, ಶ್ರೀಮತಿ ಸೌಮ್ಯ ಮಾಧವ, ನಾರಾಯಣ ತೋರಣಗುಂಡಿ, ಸುದ್ದಿ ವರದಿಗಾರ ಕರುಣಾಕರ ಕೆಮ್ಮಾರ ಉಪಸ್ಥಿತರಿದ್ದರು.
ಸಂಸ್ಥೆಯ ಮಾಲಕ ಶೈಲೇಂದ್ರ ಸರಳಾಯ ಸ್ವಾಗತಿಸಿ , ಪ್ರೆಸ್ಕ್ಲಬ್ ಅಧ್ಯಕ್ಷ ಶರೀಫ್ ಜಟ್ಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು.
ಅದೃಷ್ಟ ಗ್ರಾಹಕರಾಗಿ ಪ್ರಥಮ ಕೂಪನ್ ನಂಬರ್ ೬೩೭, ದ್ವಿತೀಯ ೯೦೮, ತೃತಿಯ ೬೪೯ ಸಂಖ್ಯೆಯ ಅದೃಷ್ಟ ಶಾಲಿಗಳಾಗಿ ಆಯ್ಕೆಯಾಗಿದ್ದಾರೆ.



