ಭಾರತೀಯ ಜೀವ ವಿಮಾ ನಿಗಮ ಸುಳ್ಯ ಶಾಖೆಯ ವತಿಯಿಂದ ನಿವೃತ್ತ ಅಧಿಕಾರಿಗಳಿಗೆ ವಿದಾಯ ಸಮಾರಂಭ

0
131

 

p>

 

ಭಾರತೀಯ ಜೀವ ವಿಮಾ ನಿಗಮ ಪ್ರತಿನಿಧಿಗಳ ಸಂಘ ಸುಳ್ಯ ಉಪಗ್ರಹ ಶಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗುತ್ತಿರುವ ಶಾಖಾಧಿಕಾರಿ ಜಿ.ಶಶಿಧರ ಹೆಗ್ಡೆ ಮತ್ತು ಆಡಳಿತಾ ಧಿಕಾರಿ ಎಸ್.ಲಿಂಗಪ್ಪ ಗೌಡ ರವರಿಗೆ ವಿದಾಯ ಸಮಾರಂಭ ಸುಳ್ಯ ಉಪಗ್ರಹ ಶಾಖೆಯಲ್ಲಿ ಜು.29 ರಂದು ಹಮ್ಮಿಕೊಳ್ಳಲಾಯಿತು.

ಪುತ್ತೂರು ಶಾಖೆಯ ಸಂಘದ ಅಧ್ಯಕ್ಷ ಕೆ.ಶಂಕರಲಿಂಗಂ ಸುಳ್ಯ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಕರ್ನಾಟಕ ರಾಜ್ಯ ಸಮಿತಿ ಅಧ್ಯಕ್ಷ ಎ.ಎಸ್‌.ಲೋಕೇಶ್ ಶೆಟ್ಟಿ ಬೆಳ್ತಂಗಡಿ, ಉಡುಪಿ ವಿಭಾಗ ಸಮಿತಿ ಅಧ್ಯಕ್ಷ ಎಂ.ಎಸ್.ಭಟ್ ಪುತ್ತೂರು,ಪುತ್ತೂರು ಶಾಖೆಯ ಹಿರಿಯ ಮುಖ್ಯ ಪ್ರಬಂಧಕ ಬಾಲಕೃಷ್ಣ ಡಿ, ಸುಳ್ಯ ಉಪಗ್ರಹ ಶಾಖೆಯ ಶಾಖಾಧಿಕಾರಿ ದೇವಿಪ್ರಸಾದ್ ವಿ.ನಾಯಕ್ ಉಪಸ್ಥಿತರಿದ್ದರು.ಎಲ್.ಐ.ಸಿ.ಪ್ರತಿನಿಧಿ ಶಂಕರ ಭಟ್ ಪ್ರಾರ್ಥಿಸಿದರು. ಮಾಧವ ಜಾಲ್ಸೂರು ಸ್ವಾಗತಿಸಿದರು.
ಸೋಮನಾಥ ಕೇರ್ಪಳ ಮತ್ತು ಪ್ರಭಾಕರ ಸೋಣಂಗೇರಿ ಸನ್ಮಾನ ಪತ್ರ ವಾಚಿಸಿದರು.
ಪ್ತಕಾಶ್ ರೈ ಸಾರಕೆರೆ ವಂದಿಸಿದರು. ಪದ್ಮನಾಭ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ನಿವೃತ್ತಗೊಂಡ ಅಧಿಕಾರಿಗಳಿಗೆ ಎಲ್.ಐ.ಸಿ.ಪ್ರತಿನಿಧಿಗಳು ಹಾರಾರ್ಪಣೆ ಮಾಡಿ ನಿವೃತ್ತ ಜೀವನಕ್ಕೆ ಶುಭ ಹಾರೈಸಿದರು.

LEAVE A REPLY

Please enter your comment!
Please enter your name here