ದೇವಚಳ್ಳ ಗ್ರಾಮದ ವಾಲ್ತಾಜೆಯಲ್ಲಿ ರಸ್ತೆ ಅಗೆದು ಇಟ್ಟ ಕಂಟ್ರಾಕ್ಟರ್

0

ಮನೆ, ಕೊಟ್ಟಿಗೆ, ಕೆರೆಗೆ ನುಗ್ಗಿದ ನೀರು

ಶಾಲೆ, ಕಾಲೋನಿ ಸಂಪರ್ಕ ಕಡಿತ ಸಾಧ್ಯತೆ

ವಾಲ್ತಾಜೆ ಕಾಲೋನಿ ರಸ್ತೆಯ ಕಡೋಡಿ ಎಂಬಲ್ಲಿ ಗುದ್ದಲಿ ಪೂಜೆ ನಡೆದು 1ವರೆ ವರ್ಷ ಕಳೆದಿದೆ ಕಂಟ್ರಾಕ್ಟರ್ ಒಬ್ಬರು ಹಳೆ ಡಾಂಬರ್ ರಸ್ತೆ ಯನ್ನು ಅಗೆದಿಟ್ಟ ಪರಿಣಾಮ ಮಳೆಗೆ ರಸ್ತೆ ಮೂಲಕ ಮಣ್ಣು ಮಿಶ್ರಿತ ನೀರು ಕೊಚ್ಚಿ ಬಂದು ಕಡೋಡಿ ಚಂದ್ರಶೇಖರ ರವರ ಮನೆಯ ಗೋಡೆಯ ಸುತ್ತ ನೀರು ಆವರಿಸಿದ್ದು, ಮನೆಯ ಹಿಂಭಾಗ ಕೊಟ್ಟಿಗೆ ಸಂಪೂರ್ಣ ನೆರೆ ನಿರ್ಮಾಣವಾಗಿ ಮನೆಯ ಮಣ್ಣಿನ ಗೋಡೆಗೆ ನೀರು ಎಳೆದಿದ್ದು, ಮನೆಯವರು ಭಯದಿಂದ ವಾಸಿಸುವಂತಾಗಿದೆ ಕುಡಿಯುವ ನೀರಿಗೆ ಆಸರೆ ಆಗಿದ್ದ ಕೆರೆಗೆ ಹೂಳು ತುಂಬಿದ್ದು ದಿನ ನಿತ್ಯದ ಉಪಯೋಗಕ್ಕೆ ಮಳೆ ನೀರು ಉಪಯೋಗ ಮಾಡುವಂತಾಗಿದೆ.

ರಸ್ತೆಯ ಬದಿಗೆ ನಿರ್ಮಾಣ ಮಾಡಿದ್ದ ತಡೆ ಗೋಡೆಗೆ ಬಹುತೇಕ ಹಾನಿಯಾಗಿದ್ದು ದೊಡ್ಡ ಪ್ರಮಾಣದಲ್ಲಿ ಮಳೆ ಮುಂದುವರಿದಲ್ಲಿ ವಾಲ್ತಾಜೆ ಶಾಲೆ,ಅಂಗನವಾಡಿ, ಕಾಲೋನಿ, ಮತ್ತು ಊರಿಗೆ ಸಂಪರ್ಕ ಕಡಿಯುವ ಭೀತಿ ಎದುರಾಗಿದೆ ಎಂದು ಸ್ಥಳೀಯರು ತಿಳಿದ್ದಾರೆ.