ಪಂಜ ಚಿದ್ಗಲ್ ಬೈಲಿನಲ್ಲಿ ನೆರೆ ನೀರಿಗೆ ಬಾಗಿನ ಅರ್ಪಣೆ

0

ಆ. 3ರಂದು ಸುರಿದ ವಿಪರೀತ ಮಳೆಯಿಂದ ಚಿದ್ಗಲ್ ಬೈಲಿನಲ್ಲಿ ರಾತ್ರಿ ನೆರೆ ಬಂದು ಹಲವರ ತೋಟ ಜಲಾವೃತಗೊಂಡಿತ್ತಲ್ಲದೇ ಕ್ಷಣ ಕ್ಷಣಕ್ಕೂ ನೀರಿನ ಮಟ್ಟ ಏರುತ್ತಲೇ ಇತ್ತೆನ್ನಾಗಿದೆ.

ಈ ಸಂದರ್ಭದಲ್ಲಿ ಈ ಎಲ್ಲಾ ಮನೆಯವರು ಜೊತೆಯಾಗಿ ಹೊನ್ನಪ್ಪ ಗೌಡ ಚಿದ್ಗಲ್ ಬೈಲು ಇವರ ತೋಟದಲ್ಲಿ ರಾತ್ರಿ 10.45 ಹೊತ್ತಿಗೆ ವರುಣ ದೇವರನ್ನು ಪ್ರಾರ್ಥಿಸಿ ತೆಂಗಿನಕಾಯಿ ಒಡೆದು ಅಕ್ಕಿಯಿಟ್ಟು ಬಾಗಿನ ಅರ್ಪಿಸಿದರು. ನಂತರ ಸ್ವಲ್ಪ ಹೊತ್ತಿನಲ್ಲಿ ನೀರಿನ ಮಟ್ಟ ಕಡಿಮೆಯಾಗುತ್ತಾ ಹೋಯಿತೆಂದು ಶ್ರೀಮತಿ ಚಂದ್ರಾ ಹೊನ್ನಪ್ಪ ಪತ್ರಿಕೆಗೆ ತಿಳಿಸಿದರು.