ಸಂಪಾಜೆ ಗ್ರಾ. ಪಂ. ನಲ್ಲಿ ಚದುರಂಗ ಆಟ

0

 

ಸಂಪಾಜೆ ಗ್ರಾ. ಪಂ ಲೈಬ್ರೆರಿಯಲ್ಲಿ ಚದುರಂಗ ಆಟ ಆಡೋಣ ಅಭಿಯಾನಕ್ಕೆ ಚಾಲನೆ. ಸಂಪಾಜೆ ಗ್ರಾ. ಪಂ ಗ್ರಂಥಾಲಯದಲ್ಲಿ ಓದುವ ಬೆಳಕು ಕಾರ್ಯಕ್ರಮದ ಅಂಗವಾಗಿ ಚದುರಂಗ ಆಟ ಆಡೋಣ ಅಭಿಯಾನಕ್ಕೆ ಪಂಚಾಯತ್ ಅಧ್ಯಕ್ಷ ಜಿ. ಕೆ. ಹಮೀದ್ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸರಿತಾ ಪಿಂಟೋ, ಗ್ರಾ. ಪಂ ಮಾಜಿ ಅಧ್ಯಕ್ಷ ಕೆ. ಪಿ. ಜಗದೀಶ, ಗ್ರಾ. ಪಂ ಸದಸ್ಯ ಜಗದೀಶ್ ರೈ, ಎಸ್. ಕೆ. ಹನೀಫ್, ಗ್ರಾ. ಪಂ ಸಿಬ್ಬಂದಿಗಳು, ತೀರ್ಪುಗಾರರು, ಹೈ ಸ್ಕೂಲ್ ಮತ್ತು ಪ್ರಾಥಮಿಕ ಶಾಲಾ ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.