ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಮತ್ತು ಗಾಂಧಿ ಚಿಂತನ ವೇದಿಕೆ ವತಿಯಿಂದ ಕೆವಿಜಿ ಪುತ್ಥಳಿಗೆ ಹಾರಾರ್ಪಣೆ – ನುಡಿ ನಮನ

0

ಅಮರ ಸುಳ್ಯದ ಶಿಲ್ಪಿ ಡಾ। ಕುರುಂಜಿ ವೆಂಕಟ್ರಮಣ ಗೌಡರ ಪುಣ್ಯತಿಥಿಯ ಅಂಗವಾಗಿ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಸುಳ್ಯ ಘಟಕ ಹಾಗೂ
ಗಾಂಧಿ ಚಿಂತನ ವೇದಿಕೆ ವತಿಯಿಂದ ಡಾ.ಕೆ.ವಿ.ಜಿ ಅವರ ಸಂಸ್ಮರಣೆಯ ಅಂಗವಾಗಿ ಸುಳ್ಯ ಖಾಸಗಿ ಬಸ್ ನಿಲ್ದಾಣ ಬಳಿ ಇರುವ ಡಾ. ಕೆ.ವಿ.ಜಿಯವರ ಪುತ್ಥಳಿಗೆ ಆ. 7 ರಂದು ಮಾಲಾರ್ಪಣೆ ಮಾಡಿ ನಮನ ಸಲ್ಲಿಸಲಾಯಿತು.

ಗಾಂಧಿ ಚಿಂತನ ವೇದಿಕೆಯ ಅಧ್ಯಕ್ಷ ಹರೀಶ್ ಬಂಟ್ವಾಳ್, ಡಾ।ಸುಂದರ್ ಕೇನಾಜೆ , ಸುಳ್ಯ ಕಸಾಪ ಅಧ್ಯಕ್ಷ ಚಂದ್ರಶೇಖರ ಪೇರಾಲುರವರು ಕೆವಿಜಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ ನುಡಿನಮನ ಸಲ್ಲಿಸಿದರು.

ಕೆವಿಜಿ ಸುಳ್ಯ ಹಬ್ಬ ಸಮಿತಿಯ ನಿಕಟಪೂರ್ವ ಅಧ್ಯಕ್ಷ ದಿನೇಶ್ ಮಡಪ್ಪಾಡಿ, ಕೆ.ಜೆ.ಯು ಜಿಲ್ಲಾ ಸಮಿತಿಯ ಜತೆ ಕಾರ್ಯದರ್ಶಿ ಈಶ್ವರ ವಾರಣಾಸಿ,
ಕೆಜೆಯು ಸುಳ್ಯ ಘಟಕದ ಅಧ್ಯಕ್ಷ ಜೆ.ಕೆ ರೈ, ಕಾರ್ಯದರ್ಶಿ ಶಿವಪ್ರಸಾದ್ ಆಲೆಟ್ಟಿ, ಗಣೇಶ್ ಕುಕ್ಕುತ್ತಡಿ, ಪ್ರೆಸ್ ಕ್ಲಬ್ ಖಜಾಂಜಿ ಯಶ್ವಿತ್ ಕಾಳಮ್ಮನೆ, ಉದ್ಯಮಿ ಸತೀಶ್ ಅಡ್ಕಾರು, ಅವಿನಾಶ್ ಬಸ್ಸಿನ ನಿರ್ವಾಹಕಿ ಜಯಂತಿ, ಪೇಪರ್ ಸಾಹೇಬ್ರು ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here