ಪಂಜ. : ಶ್ರೀ ದುರ್ಗಾ ಪೂಜೆ ಮತ್ತು ವರಮಹಾಲಕ್ಷ್ಮಿ ಪೂಜೆ ಹಾಗೂ ಪ್ರತಿಭಾ ಪುರಸ್ಕಾರ

0

 

ಶ್ರೀ ಶಾರದಾಂಬಾ ಭಜನಾ ಮಂಡಳಿ ಪಂಜ ಇದರ ವಾರ್ಷಿಕ ದುರ್ಗಾ ಪೂಜೆ , ವರಮಹಾಲಕ್ಷ್ಮಿ ಪೂಜೆ , ಪ್ರತಿಭಾ ಪುರಸ್ಕಾರ ಆ.5. ರಂದು ಪಂಜ ಶ್ರೀ ಶಾರದಾಂಬಾ ಭಜನಾ ಮಂದಿರದ ಸಭಾಭವನದಲ್ಲಿ ಜರುಗಿತು. ಪಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪೂರ್ಣಿಮಾ ದೇರಾಜೆ ಸಭಾಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಮಂಗಳೂರು ಮೀನುಗಾರಿಕಾ ನಿಗಮದ ಅಧ್ಯಕ್ಷ ಎ.ವಿ.ತೀರ್ಥರಾಮ ಮಾತನಾಡಿದರು.

ಸ್ಮಾರ್ಟ್ ಟ್ಯೂಷನ್ ಸೆಂಟರ್ ಶಿಕ್ಷಕ ಹರಿಪ್ರಸಾದ್ ಕಾಣಿಯೂರು , ಭಜನಾ ಮಂಡಳಿ ಅಧ್ಯಕ್ಷ ಬಾಲಕೃಷ್ಣ ಪುತ್ಯ, ಕಾರ್ಯದರ್ಶಿ ಗುರುಪ್ರಸಾದ್ ತೋಟ,ಭಜನೋತ್ಸವ ಸಮಿತಿ ಅಧ್ಯಕ್ಷ ಪ್ರಕಾಶ್ ಜಾಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
*ಪ್ರತಿಭಾ ಪುರಸ್ಕಾರ*:ಈ ವರುಷದ ದ್ವಿತೀಯ ಪಿಯುಸಿ ಉತ್ತಮ ಅಂಕಗಳಿಸಿದ ರೂಪಶ್ರೀ, ಶರತ್ ಕುಳ್ಳಕೋಡಿ, ಕಾರ್ತಿಕ್ ರೈ ನಾಗತೀರ್ಥ, ಗಗನ್ ಯನ್ ಕೆ, ತೇಜಸ್ ಪುತ್ಯ,ಆರ್ಯ ಬಾಬ್ಲುಬೆಟ್ಟು , ಪ್ರಿಯಾ ಮಂಜಿಕಟ್ಟೆಮತ್ತು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ಅಶ್ವಿತ್ ಕುಳ್ಳಕೋಡಿ, ಅನನ್ಯ ಜಾಕೆ ರವರನ್ನು ಪುರಸ್ಕರಿಸಲಾಯಿತು. ಇದೇ ವೇಳೆ ಎ ವಿ ತೀರ್ಥಾರಾಮ ಮತ್ತು ಹರಿಪ್ರಸಾದ್ ಕಾಣಿಯೂರು ರವರನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಪುರಂದರ ಶೆಟ್ಟಿ ನಾಗತೀರ್ಥ ಪ್ರಾರ್ಥಿಸಿದರು.ಬಾಲಕೃಷ್ಣ ಪುತ್ಯ ಸ್ವಾಗತಿಸಿದರು. ತೀರ್ಥಾನಂದ ಕೊಡೆಂಕಿರಿ ನಿರೂಪಿಸಿದರು. ಗುರುಪ್ರಸಾದ್ ತೋಟ ವಂದಿಸಿದರು.

LEAVE A REPLY

Please enter your comment!
Please enter your name here