ಗ್ರಾಮಕ್ಕೆ ಹೊರಗಿನಿಂದ ಬಂದು ವ್ಯಾಪಾರ ಮಾಡುವವರು ಪಂಚಾಯತ್‌ಗೆ ತಿಳಿಸಬೇಕು

0

 

 

ಅಜ್ಜಾವರ ಗ್ರಾ.ಪಂ. ಸೂಚನೆ

 

ಅಜ್ಜಾವರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹೊರಗಿನಿಂದ ಬಂದು ವ್ಯಾಪಾರ ಮಾಡುವವರು ಮೊದಲು ಗ್ರಾಮ ಪಂಚಾಯತ್‌ಗೆ ಬಂದು ಪರವಾನಿಗೆ ಪಡೆದುಕೊಂಡು ಬಳಿಕ ವ್ಯಾಪಾರ ಮಾಡಬೇಕು ಎಂದು ಗ್ರಾ.ಪಂ. ಅಧ್ಯಕ್ಷೆ ಸತ್ಯವತಿ ಬಸವನಪಾದೆ ಮಾಹಿತಿ ನೀಡಿದ್ದಾರೆ.

ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಈ ಗ್ರಾಮದಲ್ಲದವರು ಅತ್ತಿಂದಿತ್ತ ಸುತ್ತಾಡುತ್ತಿರುತ್ತಾರೆ, ವಾಹನಗಳಲ್ಲಿ ವಸ್ತುಗಳನ್ನು ತಂದು ಮನೆ ಮನೆಗೆ ಹೋಗಿ ವ್ಯಾಪಾರ ಮಾಡುತ್ತಿದ್ದಾರೆ. ಮನೆಯಲ್ಲಿ ಕೆಲವರು ಏಕಾಂಗಿಯಾಗಿ ಇರುವಾಗ ಈ ರೀತಿ ಹೋಗಿ ವ್ಯಾಪಾರ ಮಾಡುತ್ತಿರುವುದರ ಕುರಿತು ಗ್ರಾ.ಪಂ. ಗೆ ಸಾರ್ವಜನಿಕ ದೂರು ಅರ್ಜಿ ಬಂದಿದೆ. ಇದನ್ನು ಗಂಭೀರವಾಗಿ ಪರಿಗಣಿಸಿದ್ದು ಪೋಲೀಸ್ ಇಲಾಖೆಗೂ ಮಾಹಿತಿ ನೀಡಲಾಗಿದೆ. ಆದ್ದರಿಂದ ಪರಿಚಯ ಇಲ್ಲದ ಹಾಗೂ ಗ್ರಾಮಸ್ಥರಲ್ಲದವರು ಗ್ರಾಮ ವ್ಯಾಪ್ತಿಯಲ್ಲಿ ವ್ಯಾಪಾರ ಮಾಡುವುದಾದರೆ ಪಂಚಾಯತ್‌ಗೆ ಬಂದು, ಆಧಾರ್ ಕಾರ್ಡ್ ತೋರಿಸಿ, ಪಂಚಾಯತ್ ಅನುಮತಿ ಪಡೆದೇ ವ್ಯಾಪಾರ ಮಾಡಬೇಕು ಎಂದು ಗ್ರಾ.ಪಂ. ಅಧ್ಯಕ್ಷರು ಹೇಳಿಕೆ ನೀಡಿದ್ದಾರೆ.

LEAVE A REPLY

Please enter your comment!
Please enter your name here