ಮರ್ಕಂಜ:ತಾಲೂಕು ಮೊಗೇರ ಯುವ ವೇದಿಕೆ ವತಿಯಿಂದ ಕೆಸರುಗದ್ದೆ ಕ್ರೀಡಾಕೂಟ -ಆಟಿ ಆಚರಣೆ

0

ಸುಳ್ಯ ತಾಲೂಕು ಮೊಗೇರ ಯುವ ವೇದಿಕೆ ನೇತೃತ್ವದಲ್ಲಿ ತಾಲೂಕು ಮೊಗೇರ ಸಂಘ ಹಾಗೂ ಮರ್ಕಂಜ ಗ್ರಾಮ ಮೊಗೇರ ಸಂಘದ ಸಹಕಾರದೊಂದಿಗೆ ಕೆಸರುಗದ್ದೆ ಕ್ರೀಡಾಕೂಟ ಹಾಗೂ ಆಟಿ ಆಚರಣೆ ಮರ್ಕಂಜದ ಪನ್ನೆ ಅಮ್ಮಣಿಯವರ ಗದ್ದೆಯಲ್ಲಿ ಆ. 14 ರಂದು ನಡೆಯಿತು.

ಮರ್ಕಂಜದ ಅಂಗಡಿಮಜಲು ಪರಿವಾರ ಗುಳಿಗ ಸಾನಿಧ್ಯದ ಆಡಳಿತ ಸಮಿತಿ ಅಧ್ಯಕ್ಷ ಅಮೃತಕುಮಾರ್ ರೈ ಕ್ರೀಡಾಕೂಟವನ್ನು ಉದ್ಘಾಟಿಸಿದರು. ತಾಲೂಕು ಮೊಗೇರ ಸಂಘದ ಅಧ್ಯಕ್ಷ ಕರುಣಾಕರ ಪಲ್ಲತ್ತಡ್ಕ ಅಧ್ಯಕ್ಷತೆ ವಹಿಸಿದ್ದರು. ಮರ್ಕಂಜ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಗೋವಿಂದ ಅಳವುಪಾರೆ , ನಯನಕುಮಾರ್ ರೈ ಬಲ್ನಾಡುಪೇಟೆ , ಗದ್ದೆಯ ಮಾಲಕರಾದ ಅಮ್ಮಣಿ ಪನ್ನೆ , ರಾಜ್ಯ ಮೊಗೇರ ಸಂಘದ ಸಂಚಾಲಕರಾದ ನಂದರಾಜ್ ಸಂಕೇಶ , ತಾಲೂಕು ಮೊಗೇರ ಸಂಘದ ಪ್ರಧಾನ ಕಾರ್ಯದರ್ಶಿ ಬಾಳಪ್ಪ ಕಳಂಜ , ಮೊಗೇರ ಯುವ ವೇದಿಕೆ ಅಧ್ಯಕ್ಷ ಪ್ರಕಾಶ್ ಪಾತೆಟ್ಟಿ , ಸಂಚಾಲಕ ದೇವಪ್ಪ ಹೈದಂಗೂರು , ಮರ್ಕಂಜ ಆಶಾ ಕಾರ್ಯಕರ್ತೆ ಸವಿತಾ ಅಂಗಡಿಮಜಲು , ಮರ್ಕಂಜ ಗ್ರಾಮ ಸಮಿತಿ ಅಧ್ಯಕ್ಷ ಸೋಮನಾಥ ಮರ್ಕಂಜ ವೇದಿಕೆಯಲ್ಲಿದ್ದರು.

ಕಾರ್ಯಕ್ರಮದಲ್ಲಿ ಗದ್ದೆಯ ಮಾಲೀಕರಾದ ಅಮ್ಮಣ್ಣಿ ಪನ್ನೆ , ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ರವಿ ರಾಮಕುಂಜ ಇವರನ್ನು ಸನ್ಮಾನಿಸಲಾಯಿತು.
ಮಹೇಶ್ ಬಂಗ್ಲೆಗುಡ್ಡೆ ಹಾಗೂ ಪದ್ಮನಾಭ ಬಂಗೇರ ಕಾರ್ಯಕ್ರಮ ನಿರೂಪಿಸಿದರು. ಯುವ ವೇದಿಕೆ ಪದಾಧಿಕಾರಿಗಳು ಹಾಗೂ ಮರ್ಕಂಜ ಗ್ರಾಮ ಸಮಿತಿ ಪದಾಧಿಕಾರಿಗಳು ಸಹಕರಿಸಿದರು.

ಕೆಸರುಗದ್ದೆ ಕ್ರೀಡಾಕೂಟ ಪ್ರಯುಕ್ತ ಪುರುಷರಿಗೆ ವಾಲಿಬಾಲ್ , ಹಗ್ಗಜಗ್ಗಾಟ ಮಹಿಳೆಯರಿಗೆ ತ್ರೋಬಾಲ್ , ಹಗ್ಗಜಗ್ಗಾಟ ಹಾಗೂ ವಿವಿಧ ಸ್ಪರ್ಧೆಗಳು ನಡೆಯಿತು. ಆಟಿ ಆಚರಣೆ ಪ್ರಯುಕ್ತ ವಿಶೇಷ ಖಾಧ್ಯಗಳನ್ನು ಮರ್ಕಂಜ ಗ್ರಾಮ ಸಮಿತಿಯವರು ಮಾಡಿದ್ದರು. ಕಾರ್ಯಕ್ರಮದಲ್ಲಿ ನೂರಾರು ಜನರು ಭಾಗವಹಿಸಿದ್ದರು.