ಪೆರುವಾಜೆ ಗ್ರಾಮ ಪಂಚಾಯತ್ ನಲ್ಲಿ ವಿಜೃಂಭಣೆಯಿಂದ ನಡೆದ ಸ್ವಾತಂತ್ರ್ಯೋತ್ಸವ

0

 

ಗ್ರಾಮದ ಅಭಿವೃದ್ಧಿಯಿಂದ ದೇಶದ ಅಭಿವೃದ್ಧಿ – ಸುಬ್ಬಪ್ಪ ಕೈಕಂಬ

ಮನರಂಜಿಸಿದ ಸಾಂಸ್ಕೃತಿಕ ಕಾರ್ಯಕ್ರಮ

 

ಪೆರುವಾಜೆ ಗ್ರಾಮ ಪಂಚಾಯತ್ ವತಿಯಿಂದ 75 ನೇ ಸ್ವಾತಂತ್ರ್ರೋತ್ಸವ ಅಮೃತ ಮಹೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.
ಬೆಳಿಗ್ಗೆ ಗ್ರಾಮ ಪಂಚಾಯತ್ ನಲ್ಲಿ ಧ್ವಜಾರೋಹಣ ನಡೆಯಿತು.
ಗ್ರಾಮ ಪಂಚಾಯತ್ ಅಧ್ಯಕ್ಷ ಜಗನ್ನಾಥ ಪೂಜಾರಿ ಧ್ವಜಾರೋಹಣ ನೆರವೇರಿಸಿದರು.
ಮದ್ಯಾಹ್ನ ನಡೆದ ಸಭಾಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಜಗನ್ನಾಥ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.
ಮಂಗಳೂರು ಬಲ್ಮಠದ ಸ.ಪ್ರ.ದ.ಮಹಿಳಾ ಕಾಲೇಜು ಉಪನ್ಯಾಸಕ ಸುಬ್ಬಪ್ಪ ಕೈಕಂಬ ಪ್ರಧಾನ ಭಾಷಣ ಮಾಡಿ ಲಕ್ಷಾಂತರ ಜನರ ತ್ಯಾಗ ಬಲಿದಾನದಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿದೆ.ಹುತಾತ್ಮರು ಹಾಕಿಕೊಟ್ಟ ಹಾದಿಯಲ್ಲಿ ನಾವಿದ್ದೇವೆ.ದೇಶ ಪ್ರಗತಿಯ ಹಾದಿಯಲ್ಲಿ ನಡೆಯುತ್ತಿದೆ.ನಿಷ್ಕಲ್ಮಶ ಮನಸ್ಸಿನಿಂದ ದೇಶ ಕಟ್ಟುವ ಕೆಲಸ ಆಗಬೇಕು.ಗ್ರಾಮಗಳ ಅಭಿವೃದ್ಧಿಯಿಂದ ದೇಶದ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.
*ಸಾಧಕರಿಗೆ ಸನ್ಮಾನ*
ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಅಲೆಕ್ಕಾಡಿ , ಅಂಗನವಾಡಿ ಕಾರ್ಯಕರ್ತೆ ವಿಜಯ ಕುಮಾರಿ, ದೈವ ಪರಿಚಾರಕರಾದ ಚನಿಯ ಬಜ, ಕೊರಗ್ಗು ಅನುವುಗುಂಡಿಯವರನ್ನು ಶಾಲು ಹೊದಿಸಿ,ಫಲ ಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
*ಬಹುಮಾನ ವಿತರಣೆ*
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು.
ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಚಂದ್ರಾವತಿ,ಸದಸ್ಯ ಪದ್ಮನಾಭ ಶೆಟ್ಟಿ ಪೆರುವಾಜೆ, ಮಾಧವ ಮುಂಡಾಜೆ,ಶ್ರೀಮತಿ ಗುಲಾಬಿ ಉಪಸ್ಥಿತರಿದ್ದರು.
ಸದಸ್ಯ ಸಚಿನ್ ರಾಜ್ ಶೆಟ್ಟಿ‌ ಸ್ವಾಗತಿಸಿ , ಶಿವಪ್ರಸಾದ್ ಪೆರುವಾಜೆ ಕಾರ್ಯಕ್ರಮ ನಿರೂಪಿಸಿ, ಪದ್ಮನಾಭ ಶೆಟ್ಟಿ ವಂದಿಸಿದರು.ಪಂಚಾಯತ್ ಸಿಬ್ಬಂದಿ ಜಯಲಕ್ಷ್ಮಿ ಮತ್ತು ಅಕ್ಷತಾ ಪ್ರಾರ್ಥಿಸಿದರು.

*ನೂರಾರು ಜನರಿಂದ ಸ್ವಾತಂತ್ರ್ಯ ನಡಿಗೆ*

ಬೆಳಿಗ್ಗೆ ಧ್ವಜಾರೋಹಣ ನಡೆದ ಬಳಿಕ ಪಂಚಾಯತ್ ನಿಂದ ಜೆಡಿ ಅಡಿಟೋರಿಯಂವರೆಗೆ ನೂರಾರು ಜನರು ಸ್ವಾತಂತ್ರ್ಯ ನಡಿಗೆ ಮಾಡಿದರು.
ಘೋಷಣೆಗಳನ್ನು ಹಾಕಿದರು.
ನಂತರ ಗ್ರಾಮಸ್ಥರಿಗೆ ವಿವಿಧ ಸ್ಪರ್ಧೆಗಳು ನಡೆದವು.

ಮನರಂಜಿಸಿದ ಸಾಂಸ್ಕೃತಿಕ ಕಾರ್ಯಕ್ರಮ

ಸಭಾ ಕಾರ್ಯಕ್ರಮ ನಡೆದ ಬಳಿಕ ಮಂಗಳೂರಿನ ಪ್ರವೀಣ್ ಮರ್ಕಮೆ ಮತ್ತು ತಂಡದವರಿಂದ ಕುಸಲ್ದ ಕುರ್ಲರಿ ಎಂಬ ಹಾಸ್ಯ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸಭಾಂಗಣದಲ್ಲಿ ಸೇರಿದ್ದು ಜನರನ್ನು ಮತ್ತಷ್ಟು ಆಕರ್ಷಿಸಿತ್ತು.
ಜನರನ್ನು ಮನರಂಜಿಸಿತು.