ಸುಳ್ಯ ರೋಟರಿ ಶಾಲಾ ಇಂಟರಾಕ್ಟ್ ಪದಗ್ರಹಣ ಸಮಾರಂಭ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ

0

ಸುಳ್ಯ ರೋಟರಿ ಶಾಲಾ ಇಂಟರಾಕ್ಟ್ ಕ್ಲಬ್ ನ ಪದಗ್ರಹಣ ಸಮಾರಂಭವು ಆ.11 ರಂದು ರೋಟರಿ ಹೈಸ್ಕೂಲ್ ಮಿತ್ತಡ್ಕದಲ್ಲಿ ಜರಗಿತು.

ರೋಟರಿ ಸುಳ್ಯದ ಅಧ್ಯಕ್ಷರಾಗಿರುವ ರೊ.ಚಂದ್ರಶೇಖರ್ ಪೇರಾಲ್ ಪದಗ್ರಹಣ ಸಮಾರಂಭವನ್ನು ನೆರವೇರಿಸಿ, ಶುಭಹಾರೈಸಿದರು .

2022-2023 ರ ನೂತನ ಅಧ್ಯಕ್ಷೆಯಾಗಿ 10 ನೇ ತರಗತಿಯ ಪ್ರತಿಭಾನ್ವಿತ ವಿದ್ಯಾರ್ಥಿನಿ ಸನಿಹಾ. ಶೆಟ್ಟಿ, ಕಾರ್ಯದರ್ಶಿಯಾಗಿ ತುಷಾರ್ ಕಾರ್ತಿಕ್ , ದಂಡಾಧಿಕಾರಿಯಾಗಿ ಪ್ರಣಮ್ಯ. ಎನ್. , ಉಪಾಧ್ಯಕ್ಷೆಯಾಗಿ ಸಾನಿಕ. ರೈ., ಸಿಂಚನ. ಎನ್.ಪಿ , ಜತೆ ಕಾರ್ಯದರ್ಶಿಯಾಗಿ ಆಕರ್ಷ.ವೈ. , ಹಣಕಾಸು ನಿರ್ದೇಶಕರಾಗಿ ಮೋಕ್ಷ, ಕ್ಲಬ್ ಸರ್ವೀಸ್ ನಿರ್ದೇಶಕರಾಗಿ ಅನಂತ ಕೃಷ್ಣ ಎನ್. , ಕಮ್ಯುನಿಟಿ ಸರ್ವೀಸ್ ನಿರ್ದೇಶಕರಾಗಿ ಶೈನ್ ಯಾಪಾರೆ, ಇನ್ ಸ್ಟಿಟ್ಯೂಟ್ ಸರ್ವೀಸ್ ನಿರ್ದೇಶಕರಾಗಿ ಮನ್ವಿತ್. ಇಂಟರ್ ನ್ಯಾಶನಲ್ ಅಂಡರ್ ಸ್ಟಾಂಡಿಂಗ್ ನಿರ್ದೇಶಕರಾಗಿ ನಕ್ಷಾ. ಎನ್ ಆಳ್ವ. ಸಾಂಸ್ಕೃತಿಕ ಕಾರ್ಯಕ್ರಮದ ನಿರ್ದೇಶಕರಾಗಿ ಜಾಹ್ನವಿ, ಶರಧಿ, ಭಾನವಿ ಕೊಯಿಂಗಾಜೆ, ಯಶಸ್ವಿ. ಪಿ. ಭಟ್. ಪದವಿ ಸ್ವೀಕರಿಸಿದರು. ಇಂಟರಾಕ್ಟ ಸಭಾಪತಿ ರೋ ಪಿ ಪಿ ದಯಾನಂದ ಆಳ್ವ ಇಂಟರಾಕ್ಟ್ ಕ್ಲಬ್ ನ ಮಹತ್ವ ತಿಳಿಸಿದರು. ಇದೇ ಸಂದರ್ಭದಲ್ಲಿ 2021 -22 ನೇ ಎಸ್. ಎಸ್. ಎಲ್ .ಸಿ . ಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ 28 ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಮತ್ತು ಸ್ಮರಣಿಕೆ ನೀಡಿ ಗೌರವಿಸಲಾಯಿತು. ಶಾಲಾ ಸಂಚಾಲಕರಾದ ರೊ.ಗಿರಿಜಾಶಂಕರ್ ತುದಿ ಯಡ್ಕ ಸಂದರ್ಭೋಚಿತವಾಗಿ ಮಾತನಾಡಿದರು. ವೇದಿಕೆಯಲ್ಲಿ ರೋಟರಿ ಚಾರಿಟೇಬಲ್ ಸದಸ್ಯೆ ಮಹಾಲಕ್ಷ್ಮಿ ಕೊರಂಬಡ್ಕ , ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ವೀಣಾ ಶೇಡಿಕಜೆ , ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ಶೋಭಾ ಬೊಮ್ಮೆಟ್ಟಿ, ಉಪಸ್ಥಿತರಿದ್ದರು. ಸನಿಹ ಶೆಟ್ಟಿ, ಅಪೂರ್ವ , ವೈಷ್ಣವಿ ಶೆಟ್ಟಿ ಇವರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮಕ್ಕೆ ಇಂಟರಾಕ್ಟ್ ರ್ ಸನಿಹ ಶೆಟ್ಟಿ ಸ್ವಾಗತಿಸಿ ಕಾರ್ಯದರ್ಶಿ ಇಂl ತುಷಾರ್ ಕಾರ್ತಿಕ್ ವಂದಿಸಿದರು. 9ನೇ ತರಗತಿಯ ಸಿಂಚನ ಮತ್ತು ಪೃಥ್ವಿ ಕಾರ್ಯಕ್ರಮ ನಿರೂಪಿಸಿದರು.