ಅಡಿಕೆ ಬೆಳೆಗಾರರ ಸಹಕಾರಿ ಸಂಸ್ಥೆಗಳ ಪ್ರಮುಖರಿಂದ ದೆಹಲಿಗೆ ನಿಯೋಗ

0

 

ಅಡಿಕೆ ಕನಿಷ್ಠ ಆಮದು ಬೆಲೆ ಹೆಚ್ಚಳಕ್ಕೆ ಮನವಿ

ಮಂಜಪ್ಪ ಹೊಸಬಾಳೆ ಹಾಗೂ ರಮೇಶ ವೈದ್ಯರ ನೇತ್ರತ್ವದಲ್ಲಿ
ಕ್ಯಾಂಪ್ಕೊ ಅಧ್ಯಕ್ಷರಾದ ಎ.ಕಿಶೋರ್ ಕುಮಾರ್ ಕೊಡ್ಗಿಯವರು ಹಾಗೂ ವಿವಿಧ ಸಹಕಾರಿ ಸಂಘಗಳ ಸದಸ್ಯರನ್ನೊಳಗೊಂಡ ನಿಯೋಗವು ಆ.17 ರಂದು ದೆಹಲಿಯಲ್ಲಿ ಕೇಂದ್ರದ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿಯವನ್ನು ಭೇಟಿ ಮಾಡಿತು. ಅಡಿಕೆಯ  ಕನಿಷ್ಠ ಆಮದು ಬೆಲೆಯನ್ನು  ಕೆ.ಜಿಗೆ  360 ರೂಪಾಯಿಗೆ ನಿಗದಿಪಡಿಸುವಂತೆ ನಿಯೋಗವು ಸಚಿವರಿಗೆ ಮನವಿಯನ್ನು ಸಲ್ಲಿಸಿತು.

ಕೇಂದ್ರ ಸರಕಾರವು ಈ ಹಿಂದೆ 2017 ರಲ್ಲಿ ಕನಿಷ್ಠ ಆಮದು ಬೆಲೆಯನ್ನು ಕೆ.ಜಿಗೆ 251/-ರೂಪಾಯಿಗೆ ನಿಗದಿ ಪಡಿಸಿತ್ತು.ಕ್ಯಾಂಪ್ಕೊ ವ್ಯವಸ್ಥಾಪಕ ನಿರ್ದೇಶಕರಾದ ಹೆಚ್ .ಎಮ್.ಕೃಷ್ಣ ಕುಮಾರ್, ಅಡಿಕೆ ಮಹಾಮಂಡಳದ ಅಧ್ಯಕ್ಷರಾದ ಸುಬ್ರಹ್ಮಣ್ಯ ಯಡಗೆರೆ,,ತುಮ್ಕೋಸ್ ಅಧ್ಯಕ್ಷರಾದ ಆರ್.ಎಮ್.ರವಿ,ಕ್ಯಾಂಪ್ಕೊ ನಿರ್ದೇಶಕರು ಮತ್ತು ರಾಜ್ಯ ಸಹಕಾರ ಭಾರತಿಯ ಕಾರ್ಯದರ್ಶಿ ಕೃಷ್ಣ ಪ್ರಸಾದ್ ಮಡ್ತಿಲ,ಟಿಎಸ್ಎಸ್ ನ ನಿರ್ದೇಶಕರಾದ ಶಶಾಂಕ್ ಎಸ್. ಹೆಗಡೆ ಹಾಗೂ ಮಹಾಮಂಡಳದ ನಿರ್ದೇಶಕರಾದ ಶಿವಕುಮಾರ್  ಅವರು ನಿಯೋಗದಲ್ಲಿ ಭಾಗವಹಿಸಿದ್ದರು.