ಕೆವಿಜಿ ಪಾಲಿಟೆಕ್ನಿಕ್ : ಹುಂಡೈ ಕಂಪೆನಿಗೆ ಆಯ್ಕೆ

0

ಕುರುಂಜಿ ವೆಂಕಟ್ರಮಣ ಗೌಡ ಪಾಲಿಟೆಕ್ನಿಕ್‌ನ ಅಟೊಮೊಬೈಲ್ ವಿಭಾಗದ ೧೬ ವಿದ್ಯಾರ್ಥಿಗಳು ಹುಂಡೈ ಮೋಟಾರ್‍ಸ್‌ಗೆ ಆಯ್ಕೆಯಾಗಿದ್ದಾರೆ. ಮಂಗಳೂರಿನ ಕರ್ನಾಟಕ ಪಾಲಿಟೆಕ್ನಿಕ್‌ನಲ್ಲಿ ನಡೆದ ಕ್ಯಾಂಪಸ್ ಆಯ್ಕೆ ಪ್ರಕ್ರಿಯೆಯಲ್ಲಿ ಅಂತಿಮ ಅಟೋಮೊಬೈಲ್ ವಿಭಾಗದ ಯಕ್ಷಿತ್ ಕೆ.ಆರ್, ದೀಪಕ್ ಕೆ, ದೀಕ್ಷಿತ್ ಬಿ.ಎಲ್, ಲಿಖಿತ್ ಎಂ.ವಿ, ಪ್ರಜ್ಡಲ್ ಹೆಚ್, ಸಾತ್ವಿಕ್ ಐ.ಬಿ, ಸುಜನ್ ಎಸ್, ಯಶಸ್ ಕೆ.ಯು, ಸುಕೇತ್ ಕೆ, ಸುದೀಪ್, ಶಿವಪ್ರಸಾದ್ ಪಿ, ಶ್ರವಣ್ ಬಿ, ರೂಪೇಶ್ ಹೆಚ್.ಎನ್, ವರ್ಷಿತ್ ಕೆ, ರೂಪಿತ್ ವಿ.ಜಿ, ಹಾಗೂ ಸನ್ಮಿತ್ ಟಿ ಆಯ್ಕೆಯಾಗಿದ್ದು ಇವರಿಗೆ ಕಾಲೇಜಿನ ಆಡಳಿತ ಪರಿಷತ್ ಅಧ್ಯಕ್ಷ ಮತ್ತು ಏ.ಓ.ಎಲ್,ಇ ಯ ಪ್ರಧಾನ ಕಾರ್ಯದರ್ಶಿ ಡಾ. ರೇಣುಕಾ ಪ್ರಸಾದ್ ಕೆ.ವಿ, ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಉಜ್ವಲ್ ಯು.ಜೆ, ಕಾಲೇಜಿನ ಪ್ರಾಂಶುಪಾಲ ಜಯಪ್ರಕಾಶ ಕೆ ಮತ್ತು ಕಾಲೇಜಿನ ಬೋಧಕ, ಬೋಧಕೇತರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.