ಗ್ರಾಮ ವಾಸ್ತವ್ಯದಲ್ಲಿ ಬಂದಿರುವ ಅರ್ಜಿಗಳು 15 ದಿನದೊಳಗೆ ವಿಲೇ

0

 

ಜಾಲ್ಸೂರಿನಲ್ಲಿ‌ ಸಚಿವ ಎಸ್.ಅಂಗಾರರಿಂದ ಅಧಿಕಾರಿಗಳಿಗೆ ಸೂಚನೆ

ಗ್ರಾಮ ವಾಸ್ತವ್ಯದಲ್ಲಿ ಬಂದಿರುವ ಎಲ್ಲ ಅರ್ಜಿಗಳನ್ನು ಪರಿಶೀಲಿಸಿ 15 ದಿನಗಳಲ್ಲಿ ವಿಲೇ ಮಾಡಿ ಜನರಿಗೆ ಸೌಲಭ್ಯ ಒದಗಿಸುವ ಕೆಲಸವನ್ನು ಆಯಾ ಇಲಾಖಾಧಿಕಾರಿಗಳು ಮಾಡಬೇಕು ಎಂದು ಮೀನುಗಾರಿಕೆ ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಸೂಚನೆ ನೀಡಿದ್ದಾರೆ.

ಆ.20 ರಂದು ಜಾಲ್ಸೂರಿನಲ್ಲಿ ನಡೆದ ಗ್ರಾಮ ವಾಸ್ತವ್ಯ ದಲ್ಲಿ ಗ್ರಾಮಸ್ಥರಿಂದ ಅಹವಾಲು ಸ್ವೀಕರಿಸಿದ ಬಳಿಕ ಸಚಿವರು ಮಾತನಾಡಿದರು.

ಜಾಲ್ಸೂರಿನಲ್ಲಿ ನಿವೇಶನದ ಬೇಡಿಕೆ ಸಹಿತ ಹಲವು ಸಮಸ್ಯೆಗಳು ಜನರಿಂದ ಬಂದಿದೆ. ಎಲ್ಲದಕ್ಕೂ ನಮ್ಮ ಕಡೆಯಿಂದ ಸ್ಪಂದನ ನೀಡಲಾಗುವುದು. ತಕ್ಷಣಕ್ಕೆ ಆಗುವ ಅರ್ಜಿಗಳನ್ನು 15 ದಿನಗಳೊಳಗೆ ವಿಲೇ ಆಗಬೇಕು. ಸೇತುವೆ, ರಸ್ತೆ ಇತ್ಯಾದಿಗಳಿಗೆ ಸರಕಾರದಿಂದ ಅನುದಾನ ಒದಗಿಸಲಾಗುವುದು ಎಂದು ಅವರು ಹೇಳಿದರು.

 

ಗ್ರಾಮಸ್ಥರಿಂದ ಅಹವಾಲು ಸ್ವೀಕಾರ ನಡೆಯಿತು.
ತಹಶೀಲ್ದಾರ್ ಅನಿತಾಲಕ್ಷ್ಮೀ, ಇ.ಒ. ಭವಾನಿಶಂಕರ್, ಗ್ರಾ.ಪಂ.ಅಧ್ಯಕ್ಷ ಬಾಬು ಜಾಲ್ಸೂರು, ಉಪಾಧ್ಯಕ್ಷೆ ಮತ್ತು ಸದಸ್ಯರು ಇದ್ದರು.