ಜಾಲ್ಸೂರು ಮೆಸ್ಕಾಂ ಶಾಖೆ ಇಂಜಿನಿಯರ್ ಆಗಿ ಮಹೇಶ್ ಕುಳ

0

 

 

 

ಜಾಲ್ಸೂರಿನಲ್ಲಿ ನೂತನವಾಗಿ ಆರಂಭಗೊಂಡಿರುವ ಮೆಸ್ಕಾಂ ಶಾಖೆಯ ಇಂಜಿನಿಯರ್ ಆಗಿ ಮಹೇಶ್ ಕುಳ ಎಂಬವರು ಕರ್ತವ್ಯಕ್ಕೆ ಹಾಜರಾಗಿದ್ದಾರೆ.

 

2007 ರಲ್ಲಿ ಲೈನ್ ಮ್ಯಾನ್ ಆಗಿ ಪುತ್ತೂರಿನಲ್ಲಿ ಸೇವೆಗೆ ಸೇರಿದ ಮಹೇಶರು ಆ ಬಳಿಕ ಉಪ್ಪಿನಂಗಡಿಗೆ ವರ್ಗಾವಣೆಯಾದರು. 2017ರಲ್ಲಿ ಮುಂಬಡ್ತಿ ಪಡೆದ ಮೆಕ್ಯಾನಿಕ್ ಆದರು. 2022 ರಲ್ಲಿ ಇಲಾಖಾ ಪರೀಕ್ಷೆ ಬರೆದು ತೇರ್ಗಡೆಯಾಗಿ ಮೆಸ್ಕಾಂ ಇಂಜಿನಿಯರ್ ಆಗಿದ್ದಾರೆ.
ಇವರು ಬಳ್ಪ ಗ್ರಾಮದ ನಾಗಪ್ಪ ಗೌಡ ಕುಳ ಹಾಗೂ ಬಾಲಕಿ ದಂಪತಿಯ ಪುತ್ರ. ಮಹೇಶರ ಪತ್ನಿ ಶ್ರೀಮತಿ ಸ್ಪೂರ್ತಿ ಗೃಹಿಣಿ ಯಾಗಿದ್ದಾರೆ. ಸಮನ್ವಿ ಹಾಗೂ ಸಮರ್ಶ್ ಎಂಬ ಇಬ್ಬರು ಮಕ್ಕಳಿದ್ದಾರೆ