ಜಯನಗರ  ಶಾಲೆಗೆ ಚಯರ್ ಗಳ ಕೊಡುಗೆ

0

 

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ ಜಯನಗರದ 2019 – 22 ನೇ ಸಾಲಿನ ಒಕ್ಕೂಟದ ವತಿಯಿಂದ ಜಯನಗರ ಸರ್ಕಾರಿ ಶಾಲೆಗೆ 25 ಚಯರ್ ಗಳ ಹಸ್ತಾಂತರ ಇಂದು ನಡೆಯಿತು.

ಚೇರುಗಳ ಖರೀದಿಗೆ ಸುಮಾರು 15 ಸಾವಿರ ರೂಪಾಯಿಗಳು ಸಂಗ್ರಹಿಸಲಾಗಿದ್ದು ಇದಕ್ಕೆ 2019-  22 ನೇ ಸಾಲಿನ ಒಕ್ಕೂಟದ ಪದಾಧಿಕಾರಿಗಳು ಮತ್ತು ಸದಸ್ಯರು, ಜಯನಗರ ಶ್ರೀ ಗಜಾನನ ಭಜನಾ ಮಂದಿರ ಸಮಿತಿ, ಆದಿ ಮೊಗೇರ್ಕಳ ದೈವಸ್ಥಾನ ಕೊರಂಬಡ್ಕ ಆಡಳಿತ ಸಮಿತಿ ಮತ್ತು ಸ್ಥಳೀಯ ನಗರ ಪಂಚಾಯತ್ ಸದಸ್ಯ ಬಾಲಕೃಷ್ಣ ಭಟ್ ಕೊಡಂಕೇರಿ ರವರು ಧನ ಸಹಾಯ ನೀಡಿ ಸಹಕರಿಸಿದ್ದಾರೆ.


ಅಂದಿನ ಒಕ್ಕೂಟದ ಅಧ್ಯಕ್ಷೆ ಲಾವಣ್ಯ ಜಯನಗರ ಇದರ ನೇತೃತ್ವವನ್ನು ವಹಿಸಿದ್ದರು.
ಹಸ್ತಾಂತರ ಕಾರ್ಯಕ್ರಮದಲ್ಲಿ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷೆ ಲಾವಣ್ಯ ಜಯನಗರ, ಉಪಾಧ್ಯಕ್ಷ ಮುದ್ದಪ್ಪ, ಮತ್ತು ಸದಸ್ಯರುಗಳು ಉಪಸ್ಥಿತರಿದ್ದರು.
ವೇದಿಕೆಯಲ್ಲಿ ಜಯನಗರ ಒಕ್ಕೂಟದ ಸೇವಾ ಪ್ರತಿನಿಧಿ ವನಿತಾ, ಒಕ್ಕೂಟದ ಅಧ್ಯಕ್ಷೆ ನಳಿನಿ, ಮತ್ತು ಸದಸ್ಯರುಗಳು ಉಪಸ್ಥಿತರಿದ್ದರು.
ಸದಸ್ಯೆ ತಾರಾ ಆರ್ ರೈ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.