ಕನಕಮಜಲು ಯುವಕ ಮಂಡಲದ ವಾರ್ಷಿಕ ಮಹಾಸಭೆ ಹಾಗೂ ಪದಗ್ರಹಣ

0

 

ಅಧ್ಯಕ್ಷರಾಗಿ ಚಂದ್ರಶೇಖರ ನೆಡಿಲು, ಪ್ರ.ಕಾರ್ಯದರ್ಶಿಯಾಗಿ ಅಶ್ವಥ್ ಅಡ್ಕಾರು

ಯುವಜನ ವಿಕಾಸ ಕೇಂದ್ರ, ಕನಕಮಜಲು ಯುವಕ ಮಂಡಲದ ವಾರ್ಷಿಕ ಮಹಾಸಭೆ ಹಾಗೂ ಪದಗ್ರಹಣ ಸಮಾರಂಭವು ಕನಕಮಜಲು ಗ್ರಾಮ ಪಂಚಾಯತ್ ಸಭಾಭವನದಲ್ಲಿ ಆ. 21ರಂದು ನಡೆಯಿತು.


ವಾರ್ಷಿಕ ಮಹಾಸಭೆಯ ಸಭಾಧ್ಯಕ್ಷತೆಯನ್ನು ಯುವಕ ಮಂಡಲದ ಅಧ್ಯಕ್ಷ ಬಾಲಚಂದ್ರ ನೆಡಿಲು ವಹಿಸಿದರು.
ವೇದಿಕೆಯಲ್ಲಿ ಪೂರ್ವಾಧ್ಯಕ್ಷರಾದ ಹರಿಪ್ರಸಾದ್ ಮಾಣಿಕೋಡಿ, ಕಾರ್ಯದರ್ಶಿ ಹರ್ಷಿತ್ ಉಗ್ಗಮೂಲೆ, ಖಜಾಂಜಿ ಅವಿನ್ ಮಳಿ ಉಪಸ್ಥಿತರಿದ್ದರು. ವಾರ್ಷಿಕ ವರದಿಯನ್ನು ಕಾರ್ಯದರ್ಶಿ ಹರ್ಷಿತ್ ಉಗ್ಗಮೂಲೆ ವಾಚಿಸಿದರು. ಹಣಕಾಸಿನ ವರದಿಯನ್ನು ಖಜಾಂಜಿ ಅವಿನ್ ಮಳಿ ಮಂಡಿಸಿದರು. ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ಪೂರ್ವಾಧ್ಯಕ್ಷ ಹರಿಪ್ರಸಾದ್ ಮಾಣಿಕೋಡಿ ನಡೆಸಿದರು.
ಪದಪ್ರಧಾನ ಸಮಾರಂಭದಲ್ಲಿ ಸಭಾಧ್ಯಕ್ಷತೆಯನ್ನು ಅಧ್ಯಕ್ಷ ಬಾಲಚಂದ್ರ ನೆಡಿಲು ವಹಿಸಿದರು. ಮುಖ್ಯ ಅತಿಥಿಗಳಾಗಿ ಯುವಜನ ಸಂಯುಕ್ತ ಮಂಡಳಿ ನಿರ್ದೇಶಕ ಪ್ರವೀಣ್ ಕುಮಾರ್ ಎ. ಎಂ., ಬೆಟ್ಟಂಪಾಡಿ ಪ್ರ.ದರ್ಜೆ ಕಾಲೇಜಿನ ಪ್ರಾಧ್ಯಾಪಕ ದಾಮೋದರ ಕಣಜಾಲು, ಯುವಕ ಮಂಡಲದ
ಪೂರ್ವ ಕಾರ್ಯದರ್ಶಿ ಕುಸುಮಾಧರ ಬೊಮ್ಮೆಟ್ಟಿ , ಚಂದ್ರಶೇಖರ ನೆಡಿಲು, ಅಶ್ವಥ್ ಅಡ್ಕಾರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಯುವಜನ ಸಂಯುಕ್ತ ಮಂಡಳಿಯ ನಿರ್ದೇಶಕ ಪ್ರವೀಣ್ ಕುಮಾರ್ ಎ. ಎಂ. ಪ್ರಮಾಣ ವಚನ ಬೋಧನೆಯನ್ನು ಬೋಧಿಸಿದರು.
ಈ ಸಂದರ್ಭದಲ್ಲಿ 2022-23ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಬಾಲಚಂದ್ರ ನೆಡಿಲು , ಅಧ್ಯಕ್ಷರಾಗಿ ಚಂದ್ರಶೇಖರ ನೆಡಿಲು, ಉಪಾಧ್ಯಕ್ಷರಾಗಿ ಜಗನ್ನಾಥ ಮಾಣಿಮಜಲು, ಕಾರ್ಯದರ್ಶಿಯಾಗಿ ಅಶ್ವಥ್ ಅಡ್ಕಾರ್, ಖಜಾಂಜಿಯಾಗಿ ರಕ್ಷಿತ್ ಅಕ್ಕಿಮಲೆ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಚೇತನ್ ಮಾಣಿಮಜಲು, ಕ್ರೀಡಾ ಕಾರ್ಯದರ್ಶಿಯಾಗಿ ಅವಿನ್ ಮಳಿ, ಪತ್ರಿಕಾ ಪ್ರತಿನಿಧಿಯಾಗಿ ಹರ್ಷಿತ್ ಉಗ್ಗಮೂಲೆ, ನಿರ್ದೇಶಕರಾಗಿ ಕುಸುಮಾಧರ ಬೊಮ್ಮೆಟ್ಟಿ, ಕೀರ್ತಿ ಕನ್ನಡ್ಕ, ಚೇತನ್ ನೆಡಿಲು, ವಿಶ್ವನಾಥ ಮಾಣಿಕೊಡಿ ಆಯ್ಕೆಯಾದರು.
ಯುವಕ ಮಂಡಲದ ಸದಸ್ಯ ಚಂದ್ರಶೇಖರ ಕುದ್ಕುಳಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ನೂತನ ಕಾರ್ಯದರ್ಶಿ ಅಶ್ವಥ್ ಅಡ್ಕಾರ್ ವಂದಿಸಿದರು.