ಶಿಥಿಲಗೊಂಡ ಮನೆಯೊಳಗೆ ಹೊರಬಾರಲಾಗದ ಸ್ಥಿತಿಯಲ್ಲಿ ಮನೆಯಜಮಾನ

0

 

ಪುಟ್ಟ ಕುಟುಂಬದ ಚೇತರಿಕೆಗೆ ಬೇಕಿದೆ ಸಹೃದಯಿ ಮನಸ್ಸುಗಳ ಉದಾರ ಧನಸಹಾಯ

ಸಿಮೆಂಟ್ ಶೀಟ್ ನ ಶಿಥಿಲಗೊಂಡ ಛಾವಣಿ. ಬೀಳುವಂತೆ ಇರುವ ಮಣ್ಣಿನ ಇಟ್ಟಿಗೆಯ ಗೋಡೆ. ಗೋಡೆಗೆ ಮಳೆ ನೀರು ತಾಗಿ ಕುಸಿಯದಂತೆ ಪ್ಲಾಸ್ಟಿಕ್ ಹೊದಿಕೆ.‌ ಮನೆಯೊಳಗೆ ಖಾಯಿಲೆ ಬಾಧಿಸಿರುವ ಯಜಮಾನ. ಮನೆಯ ಯಜಮಾನ ಖಾಯಿಲೆಗೆ ಒಳಗಾಗಿ ಜೀವನ ನಡೆಸುತ್ತಿರುವ ಕರುಣಾಜನಕ ಕಥೆ-ವ್ಯಥೆಯಿದು.

ನೆಲ್ಲೂರು ಕೆಮ್ರಾಜೆ ಗ್ರಾಮದ ಹಲ್ದಡ್ಕ ಚಿನ್ನಪ್ಪ ಗೌಡ ಎಂಬವರ ಪುತ್ರ ಉದಯಕುಮಾರ್ ಎಂಬವರು ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ದುಡಿಮೆ ಮಾಡಲು ಸಾಧ್ಯವಾಗದೇ, ಚಿಕಿತ್ಸೆ ಗೂ ಹೋಗಲು ಸಾಧ್ಯವಾಗದೇ ಗುಡಿಸಲಿನಂತಿರುವ ಮನೆಯಲ್ಲಿ ಜೀವನ ಸಾಗಿಸುತ್ತಿದ್ದಾರೆ.

ಚಿನ್ನಪ್ಪ ಗೌಡರ ಮೂವರು‌ ಮಕ್ಕಳಲ್ಲಿ ಹಿರಿಯ ಮಗ ಉದಯಕುಮಾರ್. ಇ‌ನ್ನೊಬ್ಬ ಮಗ ಹಾಗೂ ಕೊನೆಯವರು ತಂಗಿ. ತಂಗಿಯನ್ನು ಮದುವೆ ಮಾಡಿಕೊಡಲಾಗಿದೆ.

6 ವರ್ಷದ ಹಿಂದೆ ಮದುವೆಯಾದ ಉದಯಕುಮಾರ್ ರವರು ಬಳಿಕ ಮನೆಯಲ್ಲಿ ಸರಿ ಬಾರದೇ 4 ವರ್ಷದ ಹಿಂದೆ ಪ್ರತ್ಯೇಕ ಮನೆ ಮಾಡಿಕೊಂಡರು. ಇದೇ ಸಮಯದಲ್ಲಿ ಉದಯರವರ ಮುಖದಲ್ಲಿ ಎದ್ದ ಗೆಡ್ಡೆಯೊಂದನ್ನು ತಪಾಸಣೆ ಮಾಡಲು ಹೋದಾಗ ಕ್ಯಾನ್ಸರ್ ನ ಲಕ್ಷಣಗಳು ಕಂಡುಬಂದವು. ಚಿಕಿತ್ಸೆ ಗಾಗಿ ಮಂಗಳೂರಿನ‌ ಜಿಲ್ಲಾಸ್ಪತ್ರೆ ವೆನ್ಲಾಕ್ ಗೆ ತೆರಳಿದರು. ಆದರೆ ಆ‌ ಬಳಿಕ ಕೊರೊನಾ‌ ಬಂದ‌ ಬಳಿಕ ಹೋಗಲು ಸಾಧ್ಯವಾಗಿರಲಿಲ್ಲ.

ಉದಯರವರು ವಾಸಿಸುತ್ತಿರುವ ಮನೆ ಬೀಳುವ ಪರಿಸ್ಥಿತಿಯಲ್ಲಿದೆ. ಮನೆಯ ಗೋಡೆ ಮಣ್ಣಿನಿಂದ‌ ಮಾಡಿದ ಇಟ್ಟಿಗೆಯದ್ದಾಗಿದ್ದು, ಬೀಳುವ ಹಂತದಲ್ಲಿದೆ. ಚಾವಣಿ ಸಿಮೆಂಟ್ ಶೀಟಿನಿಂದ‌ ಕೂಡಿದ್ದು, ಅದೂ ಬೀಳುವ ಹಂತದಲ್ಲಿದೆ.‌

ಉದಯ ಅವರ ಪತ್ನಿ ಜಯಂತಿ ಮನೆಯಲ್ಲಿ ಪತಿಯ ಆರೈಕೆ‌ ಮಾಡುತ್ತಿದ್ದು, ಈ ದಂಪತಿಗೆ 5 ವರ್ಷದ ಮಗನಿದ್ದಾನೆ.

ಉದಯಕುಮಾರ್ ರವರ ಮೂಲ ಮನೆ ನೆಲ್ಲೂರು ಕೆಮ್ರಾಜೆ ಗ್ರಾಮಕ್ಕೆ ಸೇರಿದರೆ ಈಗ ಕಟ್ಟಿಕೊಂಡಿರುವ ಮನೆ ಮರ್ಕಂಜ ಗ್ರಾಮಕ್ಕೆ ಸೇರಿದೆ. ಮನೆಗೆ ಮರ್ಕಂಜ ಗ್ರಾ.ಪಂ. ಉಪಾಧ್ಯಕ್ಷ ಗೋವಿಂದ ಅಳವುಪಾರೆ ಮುತುವರ್ಜಿ ವಹಿಸಿ ಬೆಳಕು ಯೋಜನೆಯಲ್ಲಿ‌ ವಿದ್ಯುತ್ ವ್ಯವಸ್ಥೆ ಮಾಡಿದ್ದಾರೆ.

ಧರ್ಮಸ್ಥಳ ಶೌರ್ಯ ವಿಪತ್ತು ಘಟಕದವರು ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮೇಲ್ವಿಚಾರಕ ಸೀತಾರಮ‌ ಹಾಗೂ ಸೇವಾಪ್ರತಿನಿಧಿ ಸವಿತಾರವರು ಯವರು ಭೇಟಿ ನೀಡಿ ಶೌರ್ಯ ವಿಪತ್ತು ಘಟಕದ ನೇತೃತ್ವದಲ್ಲಿ ಕ್ಸಾನ್ಸರ್ ತಜ್ಞ ಡಾ. ರಘು ಅರವನ್ನು ಭೇಟಿ ಮಾಡಿಸಿದ್ದಾರೆ. ಅವರು ಮಂಗಳೂರಿನ ಆಸ್ಪತ್ರೆಗೆ ಹೋಗಲು ಸೂಚಿಸಿದ್ದಾರೆ. ಆದರೆ ಉದಯರವಲ್ಲಿ ಆರ್ಥಿಕ ವ್ಯವಸ್ಥೆಗೆ ತನ್ನ ಮನೆಯಿಂದ‌ ಸಿಕ್ಕಿದ ಪಾಲಿನಲ್ಲಿ ತನ್ನ ಜೀವನ ನಿರ್ವಹಣೆಗೆ ಬೇಕಾದಷ್ಟು ಆದಾಯವಿಲ್ಲ.‌ ಸ್ವಲ್ಪ ತೋಟ ಬಿಟ್ಟರೆ ಬೇರೆ ಯಾವುದೇ ಆದಾಯದ ಮೂಲಗಳಿಲ್ಲ.

ಉದಯಕುಮಾರ್ ರವರು ಚೇತರಿಸಲು ಸಂಘ ಸಂಸ್ಥೆಯವರ, ದಾನಿಗಳು ಧನ ಸಹಾಯ ಮಾಡಿದರೆ ಇವರ ಕುಟುಂಬ ಚೇತರಿಸಿಕೊಳ್ಳಬಹುದು. ಅಂಥ ಸಹೃದಯ ಮನಸುಗಳಿಗಾಗಿ ಈ ಪುಟ್ಟ ಕುಟುಂಬ ಕಾಯುತ್ತಿದೆ.
ನೆರವು ಕಳುಹಿಸುವವರು ಈ ಕೆಳಗಿ‌ನ ಬ್ಯಾಂಕ್ ಅಕೌಂಟಿಂಗೆ ಕಳುಹಿಸಬಹುದು. ಎಸ್.ಬಿ.ಖಾತೆ ಸಂಖ್ಯೆ :
83680100001955. ಹೆಸರು udaya ಕುಮಾರ್.
ಬ್ಯಾಂಕ್ ಆಫ್ ಬರೋಡ
ದೊಡ್ಡತೋಟ ಶಾಖೆ IFSC code : BARB0VJDODD