*ಗೋಕುಲಂ ಕಿಡ್ಸ್ ವೇರ್ ಮಳಿಗೆ ಹಾಗೂ ರಂಗ ಮಯೂರಿ ಕಲಾಶಾಲೆ ವತಿಯಿಂದ ಅಯೋಜಿಸಿದ ಶ್ರೀ ಕೃಷ್ಣ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ

0

ಸುಳ್ಯದ ಗೋಕುಲಂ ಮಕ್ಕಳ ಸಿದ್ಧ ಉಡುಪುಗಳ ಮಳಿಗೆ ಹಾಗೂ ರಂಗ ಮಯೂರಿ ಕಲಾ ಶಾಲೆಯ ಸಹಯೋಗದಲ್ಲಿ ಆ.15 ರಂದು ನಡೆದ ಶ್ರೀಕೃಷ್ಣ-ಯಶೋಧ, ರಾಧಾ ವೇಷ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮವು ಆ.25 ರಂದು ನಡೆಯಿತು. ರಾಧಾಕೃಷ್ಣ ವಿಭಾಗದ ಪ್ರಥಮ ಸ್ಥಾನಿಯಾಗಿ ಲಗಾನ್ ಪ್ರಸಾದ್ -ಆಮೋಘ (ಪ್ರಥಮ), ಸಮನ್ವಿ-ಸಮರ್ಶ್ (ದ್ವಿತೀಯ )ಯಶೋಧ -ಕೃಷ್ಣ ವಿಭಾಗದಲ್ಲಿ ರೇವಂತ್ -ದೀಪಿಕಾ ಲೋಕೇಶ್ (ಪ್ರಥಮ) , ನಿನಾದ್ ಮೂರ್ತಿ ಕೆ.ವಿ. -ಪೂಜಾ ಶ್ರೀ ವಿತೇಶ್ ಕೋಡಿ (ದ್ವಿತೀಯ), ಕೃಷ್ಣ ವೇಷ ಸ್ಪರ್ಧೆಯಲ್ಲಿ ಅರುಷ್ (ಪ್ರಥಮ) , ಜಶ್ವಿ ಗೌಡ (ದ್ವಿತೀಯ) , 4 ವರ್ಷದ ಮಕ್ಕಳ ಕೃಷ್ಣ ವೇಷ ಸ್ಪರ್ಧೆಯಲ್ಲಿ ಹಶ್ವಿ ಅಡ್ಕಾರ್ ಪ್ರಥಮ , ಸಮೀಕ್ಷಾ ದ್ವಿತೀಯ ಸ್ಥಾನಿಯಾಗಿದ್ದಾರೆ.

ಇವರಿಗೆ ಸುಳ್ಯ ಎಚ್ ಡಿಎಫ್ ಸಿ ಬ್ಯಾಂಕ್ ನ ಮ್ಯಾನೇಜರ್ ವಿಶ್ವನಾಥ ಜೋಯಪ್ಪ ನಿಡ್ಯಮಲೆ, ಸ್ಪರ್ಧೆಯ ತೀರ್ಪುಗಾರರಾದ ಪ್ರಸನ್ನ ಐವರ್ನಾಡು, ದೇವಿಪ್ರಸಾದ್ ಕಾಯರ್ತೋಡಿ, ರಂಗ ಮಯೂರಿ ಕಲಾಶಾಲೆಯ ನಿರ್ದೇಶಕರಾದ ಲೋಕೇಶ್ ಊರುಬೈಲು, S.6 ನ ಕಾರ್ಯದರ್ಶಿ ರವಿಚಂದ್ರ ಕೊಡಿಯಾಲಬೈಲು,ಗೋಕುಲಂನ ಮ್ಯಾನೇಜಿಂಗ್ ಪಾರ್ಟ್ನರ್ ಬಾಲಕೃಷ್ಣ ಎಂ.ಬಹುಮಾನ ನೀಡಿ ಗೌರವಿಸಿದರು.

ಕಾರ್ಯಕ್ರಮದಲ್ಲಿ ಗಿರೀಶ್ ಪಾಲಡ್ಕ , ನವೀನ್ ಅಳಿಕೆ ,ಮಧು ಕಿರಣ್ , ಗುರುರಾಜ್ ಭಟ್ ,ಶಶಿಪ್ರಸಾದ್ ಕಾಟೂರು ,ಧೀರಜ್ ,ಕಾರ್ತಿಕ್ ಗೌಡ ,ವನಿತ, ಮಮತ, ಮನೋಹರ ಬೊಳ್ಳೂರು, ಚಂದ್ರಶೇಖರ ಉಬರಡ್ಕ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಪಾದಂ ಫೂಟ್ ವೇರ್ ನ ಮ್ಯಾನೇಜಿಂಗ್ ಪಾರ್ಟ್ನರ್ ಚಿದಾನಂದ ವಿದ್ಯಾನಗರ ನಿರೂಪಿಸಿ, ಸ್ವಾಗತಿಸಿದರು, ಸುಳ್ಯ ಶ್ರೀಹರಿ ಬಿಲ್ಡಿಂಗ್ ನಲ್ಲಿ ರುವ ಪೊಪ್ಯುಲರ್ ಬೇಕರಿಯ ಮಾಲಕರಾದ ಅನೂಪ್ ಪೈ ಧನ್ಯವಾದ ಗೈದರು.
ಸ್ಪರ್ಧೆಯಲ್ಲಿ ಸುಮಾರು 80 ಕ್ಕೂ ಮಿಕ್ಕಿ ಚಿಣ್ಣರು ಹಾಗೂ ರಾಧೆಯರಾಗಿ ವೇಷ ಧರಿಸಿದ ಪೋಷಕರು ಭಾಗವಹಿಸಿದ್ದರು.

ಪೋಟೋ: N.S.photography