ಅರಂತೋಡು : ಸುಳ್ಯ ತಾಲೂಕು ಮಟ್ಟದ ಪ್ರಾಥಮಿಕ ವಿಭಾಗದ ಬಾಲಕ, ಬಾಲಕಿಯರ ತ್ರೋಬಾಲ್ ಪಂದ್ಯಾಟದ ಸಮಾರೋಪ

0

 

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸುಳ್ಯ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಅರಂತೋಡು ಇದರ ಸಹಯೋಗದಲ್ಲಿ ಸುಳ್ಯ ತಾಲ್ಲೂಕು ಮಟ್ಟದ ಪ್ರಾಥಮಿಕ ವಿಭಾಗದ ಬಾಲಕ ಬಾಲಕಿಯರ ತ್ರೋಬಾಲ್ ಪಂದ್ಯಾ ಕೂಟ ಅರಂತೋಡು ಪ್ರಾಥಮಿಕ ಶಾಲಾ ವಠಾರದಲ್ಲಿ ಆ.27ರಂದು ನಡೆಯಿತು.

ಸಮಾರೋಪ ಸಮಾರಂಭದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅರಂತೋಡು ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸುರೇಶ್ ಯು.ಕೆ ವಹಿಸಿದರು. ಅರಂತೋಡು ತೆಕ್ಕಿಲ್ ಪ್ರತಿಷ್ಠಾನ ಅಧ್ಯಕ್ಷ ಟಿ.ಎಮ್.ಶಹೀದ್,ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕಿಶೋರ್ ಉಳುವಾರು,ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಸತೀಶ್ , ಸುಳ್ಯ ಶಿಕ್ಷಣ ಪರಿವೀಕ್ಷಣಾಧಿಕಾರಿ ಸೂಪಿ ಪೆರಾಜೆ ,ವಾರಿಜ ಕುರುಂಜಿ,ಸಿ.ಅರ್.ಪಿ.ಮಹೇಶ್, ಅನ್ವಾರುಲ್ ಹುದಾ ಯಂಗ್ ಮೆನ್ಸ್ ಎಸೋಸಿಯೆಶನ್ ಅಧ್ಯಕ್ಷ ಮಜೀದ್,ಎ ಎಸ್ ಐ ಚಂದ್ರಶೇಖರ ಉಳುವಾರು, ಕಾರ್ಯದರ್ಶಿ ಫಸಿಲು,ಎಸ್ ಡಿ ಎಮ್ ಸಿ ಉಪಾಧ್ಯಕ್ಷೆ ಜಯಂತಿ, ಅರಂತೋಡು ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಗೋಪಾಲಕೃಷ್ಣ ಬನ, ದೈಹಿಕ ಶಿಕ್ಷಕಿ ಸರಸ್ವತಿ ಕೆ , ಉಪಸ್ಥಿತರಿದ್ದರು. ಶಾಲಾ ಎಸ್ ಡಿ ಎಮ್ ಸಿ ಸಮಿತಿಯವರು ವಿಧ್ಯಾರ್ಥಿಗಳ ಪೋಷಕರು ಸಹಕರಿಸಿದರು. ಗೋಪಾಲಕೃಷ್ಣ ಸ್ವಾಗತಿಸಿ ಶಿಕ್ಷಕಿ ಸರಸ್ವತಿ ವಂದಿಸಿ ಶಿಕ್ಷಕಿ ರೇಷ್ಮಾ ಜೆ.ಇ.ಕಾರ್ಯಕ್ರಮ ನಿರೂಪಿಸಿದರು .
ತ್ರೊಬಾಲ್ ಪಂದ್ಯಾಟದ ಬಾಲಕರ ವಿಭಾಗದಲ್ಲಿ ಪ್ರಥಮ ರೋಟರಿ ಅಂಗ್ಲಮಾಧ್ಯಮ ಶಾಲೆ ಸುಳ್ಯ, ದ್ವಿತೀಯ ಮೊರಾಜಿ ದೇಸಾಯಿ ವಸತಿ ಶಾಲೆ ಪಂಜ, ಬಾಲಕಿಯರ ವಿಭಾಗದಲ್ಲಿ ಪ್ರಥಮ ಸೈಂಟ್ ಜೋಸೆಫ್ ಅಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ ಸುಳ್ಯ, ದ್ವಿತೀಯ ಮೋರಾಜಿ ದೇಸಾಯಿ ವಸತಿ ಶಾಲೆ ಪಂಜ ಪಡೆದುಕೊಂಡಿತು.