ಶ್ರೀಮತಿ ಪುಷ್ಪಾವತಿ ಮಣಿಯಾಣಿ ಕಲ್ಲುಮುಟ್ಲು ರವರ ಶ್ರದ್ಧಾಂಜಲಿ ಕಾರ್ಯಕ್ರಮ

0

 

ಸುಳ್ಯ ಕಲ್ಲುಮುಟ್ಲು ನಿವಾಸಿ ದಿ.ಸುಬ್ಬಯ್ಯ ಮಣಿಯಾಣಿ ಯವರ ಪತ್ನಿ ಶ್ರೀಮತಿ ಪುಷ್ಪಾವತಿ ಮಣಿಯಾಣಿ ಕಲ್ಲುಮುಟ್ಲು ರವರು ಆ.19 ರಂದು ನಿಧನರಾಗಿದ್ದು ಅವರ ಉತ್ತರ ಕ್ರಿಯಾಧಿ ಸದ್ಗತಿ ಶ್ರದ್ಧಾಂಜಲಿ ಕಾರ್ಯಕ್ರಮ ಆ.30 ರಂದು ಸುಳ್ಯದ ಅಂಬಟೆಡ್ಕ ಗಿರಿದರ್ಶಿನಿ ಕಲಾ ಮಂದಿರದಲ್ಲಿ ನಡೆಯಿತು.


ಮೃತರ ಜೀವನಗಾಥೆಯ ಕುರಿತು ಸಾಮಾಜಿಕ ಧುರೀಣ ಲ| ಎಂ.ಬಿ.ಸದಾಶಿವ , ಹಿರಿಯ ಯಕ್ಷಗಾನ ಕಲಾವಿದ ಅರುವ ಕೊರಗಪ್ಪ ಶೆಟ್ಟಿ ,ಯುವ ನ್ಯಾಯವಾದಿ ಹರೀಶ್ ಬೂಡುಪನ್ನೆ ಯವರು ನುಡಿನಮನ ಸಲ್ಲಿಸಿದರು.


ಈ ಸಂದರ್ಭದಲ್ಲಿ ರುಕ್ಮಯ್ಯದಾಸ್ ಕಲ್ಲುಮುಟ್ಲು, ಮೃತರ ಪುತ್ರರಾದ ಯಕ್ಷಗಾನ ಕಲಾವಿದ ಶೇಖರ ಮಣಿಯಾಣಿ, ಶಿಕ್ಷಣ ಇಲಾಖೆಯ ಉದ್ಯೋಗಿ ರತ್ನಾಕರ ಕಲ್ಲುಮುಟ್ಲು, ಕರಾವಳಿ ಹೋಟೆಲ್ ಮಾಲಕ ರವಿಪ್ರಕಾಶ್ ಕಲ್ಲುಮುಟ್ಲು, ಪುತ್ರಿಯರಾದ ಶ್ರೀಮತಿ ನಳಿನಾಕ್ಷಿ, ಶ್ರೀಮತಿ ಸತ್ಯವತಿ, ಅಳಿಯಂದಿರಾದ ಹಿರಣ್ಯ, ಗೋಪಾಲ, ಸೊಸೆಯಂದಿರಾದ ಕುಸುಮ, ತೇಜಾವತಿ, ಅನಂತೇಶ್ವರೀ ಹಾಗೂ ಮೊಮ್ಮಕ್ಕಳು, ಕುಟುಂಬಸ್ಥರು ಉಪಸ್ಥಿತರಿದ್ದರು. ಸುದ್ದಿ ವರದಿಗಾರ ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಆಗಮಿಸಿದ ಎಲ್ಲಾ ಬಂಧು ಮಿತ್ರರು ಮೃತರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.