ಕೆವಿಜಿ ಪಾಲಿಟೆಕ್ನಿಕ್ : ನಾಗರಾಜ ಎಂ.ಸಿ ಯವರಿಗೆ ಬೀಳ್ಕೊಡುಗೆ

0

 

 

ಕುರುಂಜಿ ವೆಂಕಟ್ರಮಣ ಗೌಡ ಪಾಲಿಟೆಕ್ನಿಕ್ ನ ಆಟೋಮೊಬೈಲ್ ವಿಭಾಗದ ಆಯ್ಕೆ ಶ್ರೇಣಿ ಉಪನ್ಯಾಸಕ ನಾಗರಾಜ್ ಎಂಸಿ ಇವರಿಗೆ ಬೀಳ್ಕೊಡುಗೆ ಸಮಾರಂಭ ಆ. 29ರಂದು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಜಯಪ್ರಕಾಶ್ ಕಲ್ಲುಗದ್ದೆ ವಹಿಸಿ ಸಂಸ್ಥೆಯಲ್ಲಿ 30 ವರ್ಷ ಸೇವೆ ಸಲ್ಲಿಸಿ ನಿವ್ರತ್ತರಾದ ನಾಗರಾಜ ಎಂ.ಸಿ.ಯವರನ್ನು ಸನ್ಮಾನಿಸಿದರು . ಮುಖ್ಯ ಅತಿಥಿಯಾಗಿ ಸಂಸ್ಥೆಯ ವಿಶ್ರಾಂತ ಪ್ರಾಂಶುಪಾಲ ಗಣೇಶ್ ಎನ್.ಆರ್. ಉಪಸ್ಥಿತರಿದ್ದು ನಿವ್ರತ್ತರಿಗೆ ಶುಭ ಹಾರೈಸಿದರು.
ಉಪ ಪ್ರಾಂಶುಪಾಲ ಶ್ರೀಧರ್ ಎಂ. ಕೆ. ಸನ್ಮಾನ ಪತ್ರ ವಾಚಿಸಿದರು ಅಟೊಮೊಬೈಲ್ ವಿಭಾಗ ಮುಖ್ಯಸ್ಥ ಹಾಗೂ ಅಕಾಡೆಮಿಕ್ ಡೀನ್ ಚಂದ್ರಶೇಖರ ಎಂ ಎನ್ ಅಭಿನಂದನಾ ಭಾಷಣ ಮಾಡಿದರು. ಸನ್ಮಾನ ಸ್ವೀಕರಿಸಿದ ನಾಗರಾಜ ಎಮ್‌.ಸಿ ಮಾತನಾಡಿ ತಾನು ಈ ಸಂಸ್ಥೆಯಲ್ಲಿ ದುಡಿಯಲು ಅವಕಾಶ ಮಾಡಿಕೊಟ್ಟ ದಿ. ಡಾ. ಕುರುಂಜಿ ವೆಂಕಟ್ರಮಣ ಗೌಡ ದಂಪತಿಗಳನ್ನು ಸ್ಮರಿಸಿಕೊಂಡರಲ್ಲದೇ ತನ್ನ ಬೆಳವಣಿಗೆಗೆ ಸಹಕರಿಸಿದ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ ನ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಒಕ್ಕಲಿಗ ಸಂಘದ ಉಪಾಧ್ಯಕ್ಷ ಡಾ. ರೇಣುಕಾ ಪ್ರಾಸಾದ್ ಕೆ.ವಿ.ಯವರ ಮಾರ್ಗದರ್ಶನ ಹಾಗೂ ಸಂಸ್ಥೆಯ ಪ್ರಾಂಶುಪಾಲರು ಹಾಗೂ ಸಹದ್ಯೋಗಿಗಳ ಸಹಕಾರಕ್ಕೆ ಕ್ರತಜ್ಞತೆ ಸಲ್ಲಿಸಿದರು. ವೇದಿಕೆಯಲ್ಲಿ ಕಛೇರಿ ಅಧಿಕ್ಷಕ ಧನಂಜಯ ಕೆ ಉಪಸ್ಥಿತರಿದ್ದರು. ಕಛೇರಿ ಸಿಬ್ಬಂದಿ ಜಯಲಕ್ಷ್ಮಿ ಹಾಗೂ ಪದ್ಮಾವತಿ ಯವರ ಪ್ರಾರ್ಥನೆ ಯೊಂದಿಗೆ ಆರಂಭಗೊಂಡ ಸಭಾ ಕಾರ್ಯ ಕ್ರಮದಲ್ಲಿ ಎನ್ನೆಸ್ಸೆಸ್ ಕಾರ್ಯಕ್ರಮಾಧಿಕಾರಿ ಚಂದ್ರಶೇಖರ ಬಿಳಿನೆಲೆ ಸ್ವಾಗತಿಸಿ, ಅಟೊಮೊಬೈಲ್ ವಿಭಾಗದ ಮೆಕ್ಯಾನಿಕ್ ಚೆನ್ನಕೇಶವ ವಂದಿಸಿದರು. ಸಿವಿಲ್ ವಿಭಾಗದ ಶಿಕ್ಷಕ ನಾರಾಯಣ ತೋರಣಗಂಡಿ ಕಾರ್ಯಕ್ರಮ ನಿರೂಪಿಸಿದರು.