ಕಾಯರ್ತೋಡಿ : ಮಣ್ಣಿನಿಂದ ಗಣಪತಿ ಅಕೃತಿ ತಯಾರಿಸುವ ಸ್ಪರ್ಧೆ

0

 

 

ರಾಜ್ಯ ಪ್ರಶಸ್ತಿ ಪುರಸ್ಕೃತ ಮಿತ್ರಬಳಗ ಕಾಯರ್ತೋಡಿ ಇದರ ವತಿಯಿಂದ ಗಣೇಶ ಚತುರ್ಥಿ ಪ್ರಯುಕ್ತ ಶಾಲಾ ಮಕ್ಕಳಿಗಾಗಿ ಮಣ್ಣಿನಿಂದ ಗಣಪತಿ ಅಕೃತಿ ತಯಾರಿಸುವ ಸ್ಪರ್ಧೆ ಕಾಯರ್ತೋಡಿ ಶ್ರೀ ಮಹಾವಿಷ್ಟು ದೇವಾಲಯಾದ ಆವರಣದಲ್ಲಿ ಸೆ. 31ರಂದು ನಡೆಯಿತು ಸುಮಾರು 26 ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಸಮೋರೋಪ ಸಮಾರಂಭದ ಅಧ್ಯಕ್ಷತೆಯನ್ನು ಮಿತ್ರಬಳಗ (ರಿ ) ಕಾಯರ್ತೋಡಿ ಇದರ ಅಧ್ಯಕ್ಷ ಸಚಿನ್ ದೆಂಗೋಡಿಯವರು ವಹಿಸಿದ್ದರು.
ವೇದಿಕೆಯಲ್ಲಿ ಉಪಸ್ಥಿತರಾಗಿ ಎ. ಟಿ ಕುಸುಮಾಧರ ನಿರ್ದೇಶಕರು ಮಿತ್ರಬಳಗ (ರಿ ) ಕಾಯರ್ತೋಡಿ, ನಾರಾಯಣ ಕೇಕಡ್ಕ ಅಧ್ಯಕ್ಷರು ಶ್ರೀ ರಕ್ತೇಶ್ವರಿ ಜೀರ್ಣೋದ್ದಾರ ಸಮಿತಿ ಸೂರ್ತಿಲ, ಆನಂದ ನಡುಮುಟ್ಲು ವ್ಯವಸ್ಥಾಪನ ಸಮಿತಿ ಸದಸ್ಯರು ಶ್ರೀ ಮಹಾವಿಷ್ಣು ದೇವಸ್ಥಾನ ಕಾಯರ್ತೋಡಿ ಉಪಸಿತರಿದ್ದರು. ದೇವಿಪ್ರಸಾದ್ ಎ ಸ್ವಾಗತಿಸಿ, ಮಿತ್ರಬಳಗದ ಪ್ರಧಾನ ಕಾರ್ಯದರ್ಶಿಯಾದ ಮಹೇಶ್ ಕುದ್ಪಾಜೆ ಕಾರ್ಯಕ್ರಮ ನಿರೂಪಿಸಿದರು…